Connect with us

Chamarajanagar

ಗಡಿ ಜಿಲ್ಲೆಯಲ್ಲಿ ಶ್ರೀಮುರಳಿಯ ಬೆನ್ನಟ್ಟಿದ ಎದುರಾಳಿಗಳು

Published

on

ಚಾಮರಾಜನಗರ: ನಟ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾದ ಚಿತ್ರೀಕರಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.

ಹಳ್ಳಿ ವಾತಾವರಣದ ಚಿತ್ರೀಕರಣಕ್ಕೆ ಪೂರಕವಾದ್ದರಿಂದ ಈ ಸ್ಥಳದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ‘ಮದಗಜ’ ಚಿತ್ರದ ಶೇ.25ರಷ್ಟು ಶೂಟಿಂಗ್ ವಾರಣಾಸಿಯಲ್ಲಿ ಮುಗಿದಿದೆ. ಈಗ ಶ್ರೀಮುರಳಿ ಗ್ರಾಮದೊಳಗೆ ಬೈಕಿನಲ್ಲಿ ಸಂಚಾರ ಮಾಡುವ ಮತ್ತು ಎದುರಾಳಿಗಳು ನಟನನ್ನ ಹಿಂಬಾಲಿಸುವ ದೃಶ್ಯ ಹಂಗಳ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಯಿತು.

ಈ ವೇಳೆ ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ನಿಂತಿದ್ದು, ಎಲ್ಲರಿಗೂ ಶ್ರೀಮುರುಳಿ ವಿಶ್ ಮಾಡಿದರು. ‘ಮದಗಜ’ ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೆ ‘ಮದಗಜ’ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿತ್ತು. ಈ ವೇಳೆ ಯಾರೊಬ್ಬರಿಗೂ ಸುಳಿವು ನೀಡದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಮದಗಜ’ ಶೂಟಿಂಗ್ ಸೆಟ್‍ಗೆ ಎಂಟ್ರಿ ಕೊಟ್ಟಿದ್ದರು. ಈ ಸಮಯ ಚಿತ್ರತಂಡದವರ ಜೊತೆ ದರ್ಶನ್ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದರು.

ದರ್ಶನ್ ಶೂಟಿಂಗ್ ಸೆಟ್‍ಗೆ ಭೇಟಿ ನೀಡಿದ್ದ ಬಗ್ಗೆ ನಟ ಶ್ರೀಮುರಳಿ ಸೋಶಿಯಲ್ ಮೀಡಿಯಾದಲ್ಲಿ ಹರ್ಷ ವ್ಯಕ್ತಪಡಿಸಿದ್ದರು. ‘ಸಖತ್ ಟೈಂ’ ಎಂದು ನಟ ಶ್ರೀಮುರಳಿ ಟ್ವೀಟ್ ಮಾಡಿದ್ದರು.

Click to comment

Leave a Reply

Your email address will not be published. Required fields are marked *