Tuesday, 19th November 2019

ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿಯನ್ನ ವಶಕ್ಕೆ ಪಡೆದ ಸಿಐಡಿ

ಧಾರವಾಡ: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಶನಿವಾರ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‍ಐಟಿ ತಂಡದಿಂದ ಬಂಧನಕ್ಕೆ ಒಳಗಾಗಿದ್ದ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿಯನ್ನ ಧಾರವಾಡದ 3 ನೇ ಹೆಚ್ಚುವರಿ ದಿವಾನಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಿಐಡಿ ತಂಡ, ಕಲ್ಬುರ್ಗಿ ಹತ್ಯೆ ಹಿನ್ನೆಲೆ 14 ದಿನಗಳ ಕಾಲ ವಿಚಾರಣೆಗೆ ತಮ್ಮ ವಶಕ್ಕೆ ಪಡೆದಿದೆ. ಇಂದು ಇಬ್ಬರು ಆರೋಪಿಗಳನ್ನ ನ್ಯಾಯಾಲಯದಿಂದ ವಶಕ್ಕೆ ಪಡೆದು, ಜಿಲ್ಲಾ ಆಸ್ಪತ್ರೆಯಲ್ಲಿ ಎಮ್‍ಎಸ್‍ಸಿ ಮಾಡಿಸಲಾಯಿತು.

ಆರೋಪಿಗಳನ್ನು ನಗರದ ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆದೊಯ್ದ ಸಿಐಡಿ ತಂಡ, ಭಾನುವಾರದವರೆಗೆ ಇಲ್ಲಿಯೇ ಇರಿಸಲಾಗುವುದು. ನಂತರ ಹತ್ಯೆಯಾದ ಕಲ್ಬುರ್ಗಿಯವರ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ. ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಧೀಶರ ಎದುರು ನಾವು ಏನು ತಪ್ಪು ಮಾಡದೇನೇ ನಮ್ಮನ್ನ ಇಲ್ಲಿಗೆ ತರಲಾಗಿದೆ ಎಂದು ಹೇಳಿದ್ದಾರೆ.

ಆರೋಪಿಗಳ ಪರ ವಕೀಲರು, ಇಬ್ಬರನ್ನು ಸಿಐಡಿ ಕಸ್ಟಡಿಗೆ ನೀಡಬಾರದು ಎಂದು ವಾದ ಮಂಡಿಸಿದರು. ಸದ್ಯ ನ್ಯಾಯಾಲಯ ಸೆಪ್ಟೆಂಬರ್ 28 ರ ವರೆಗೆ ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ನೀಡಿದೆ. ಇನ್ನು ಗೌರಿ ಹತ್ಯೆಯಲ್ಲಿ 6 ದಿನ ತನಿಖೆಗೆ ವಶಕ್ಕೆ ಪಡೆದಿದ್ದ ಸಿಐಡಿ ತಂಡ ಇಲ್ಲಿವರೆಗೆ ತನಿಖೆ ಮಾಡಿಲ್ಲ ಎಂದು ಆರೋಪಿಗಳ ಪರ ವಕೀಲರು ಹೇಳಿದ್ರು. ಸದ್ಯ ಆರೋಪಿಗಳಿಗೆ ವಕೀಲರಿಗೆ ಭೇಟಿ ಮಾಡಲು ಮತ್ತು ಮೆಡಿಕಲ್ ಟ್ರಿಟಮೆಂಟ್ ಕೊಡಿಸಬೇಕು. ಆರೋಪಿಗಳಿಗೆ ಪ್ರತಿ 48 ಗಂಟೆಗಳಿಗೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕೆಂದು ನ್ಯಾಯಾಲಯ ತಿಳಿಸಿದೆ. ಆರೋಪಿಗಳಿಬ್ಬರು ನ್ಯಾಯಾಲಯದಲ್ಲಿ ಸಿಐಡಿ ತಂಡ ಊಟಕ್ಕೆ ತೊಂದರೆ ಮಾಡಿದ್ದಾರೆ ಹಾಗೂ ಹಣ ಕೇಳಿದ್ದಾರೆ ಎಂದು ಆರೋಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *