Saturday, 24th August 2019

Recent News

ಅರ್ಧ ಚಂದ್ರಗ್ರಹಣ ದೋಷ ನಿವಾರಣೆಗೆ ಪರಿಹಾರ

ಬೆಂಗಳೂರು: ಈ ಬಾರಿ ಚಂದ್ರಗ್ರಹಣ ಧನಸ್ಸು ಮತ್ತು ಮಕರ ರಾಶಿಯವರಿಗೆ ಹೆಚ್ಚು ದೋಷಕರವಾಗಲಿದೆ. ವೃಷಭ ಲಗ್ನ ಮತ್ತು ಮಿಥುನ ಲಗ್ನದಲ್ಲಿ ಚಂದ್ರಗ್ರಹಣ ಸಂಭವಿಸುತ್ತಿದೆ. ಹಾಗಾಗಿ ಧನಸ್ಸು, ಮಕರ, ವೃಷಭ ಮತ್ತು ಮಿಥುನ ರಾಶಿಯವರಿಗೆ ಸ್ವಲ್ಪ ಮಟ್ಟದ ದೋಷ ಎದುರಾಗಲಿದೆ ಎಂದು ಜೋತಿಷ್ಯಶಾಸ್ತ್ರಜ್ಞರು ಹೇಳುತ್ತಾರೆ.

ದೋಷ ನಿವಾರಣೆ:
ಗ್ರಹಣ ಕಾಲದಲ್ಲಿ ಧನಸ್ಸು, ಮಕರ, ವೃಷಭ ಮತ್ತು ಮಿಥುನ ರಾಶಿಯವರು ನಿದ್ರೆ ಮಾಡದೇ ಕೆಳಗೆ ನೀಡಲಾಗಿರುವ ಶ್ಲೋಕವನ್ನು ಕ್ರಮಬದ್ಧವಾಗಿ ಹೇಳುತ್ತಾ ಪಾರಾಯಣ ಮಾಡಬೇಕು.
ಯೋ ಸೌ ವ್ರಜಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ
ಚಂದ್ರಗ್ರಹೋಪರಾಗತ್ಥ ಗ್ರಹಪೀಡಾಂ ವ್ಯಪೋಹತು

ಗ್ರಹಣ ಮೋಕ್ಷವಾದ ಬಳಿಕ ಸ್ನಾನ ಮಾಡಿ ಶ್ವೇತ ವಸ್ತ್ರ ಧರಿಸಿ ಸಮೀಪದ ದೇವಸ್ಥಾನಗಳಿಗೆ ಹೋಗಬೇಕು. ಅಲ್ಲಿ ಹೋಗಿ ವ್ಯವಸ್ಥಿತವಾಗಿ ಅಂದ್ರೆ ನಿಮ್ಮ ನಿಮ್ಮ ಶಕ್ತಿನುಸಾರವಾಗಿ ತಂಡೂಲಧಾನ್ಯ (ಅಕ್ಕಿ ಮತ್ತು ಹುರುಳಿ)ವನ್ನು ದಾನ ಮಾಡಿ ದೇವರಿಗೆ ನಮಸ್ಕರಿಸಿ. ಈ ರೀತಿ ಮಾಡುವದರಿಂದ ಚಂದ್ರಗ್ರಹಣದಿಂದ ಬಂದಿರತಕ್ಕಂತಹ ಸ್ವಲ್ಪಮಟ್ಟದ ದೋಷ ನಿವಾರಣೆಯಾಗುತ್ತದೆ.

ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ವರ್ಷದ 2ನೇ ಚಂದ್ರಗ್ರಹಣ ಇದಾಗಿದ್ದು, ದಕ್ಷಿಣ ಏಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕಾ, ಯೂರೋಪ್, ಆಸ್ಟ್ರೇಲಿಯಾದಲ್ಲಿ ಗೋಚರವಾಗುವುದು. ಇಂದು ಮಧ್ಯರಾತ್ರಿ ಆಗಸದಲ್ಲಿ ಕೌತುಕವೊಂದು ನಡೆಯಲಿದೆ. ಅದುವೇ ಕೇತುಗ್ರಸ್ಥ ಚಂದ್ರಗ್ರಹಣ. ಒಟ್ಟು 2 ಗಂಟೆ 58 ನಿಮಿಷಗಳ ಕಾಲ ಸಂಭವಿಸುವ ಗ್ರಹಣದ ಸಮಯದಲ್ಲಿ ಚಂದ್ರನ ಕಾಂತಿಯಲ್ಲಿ ಶೇ.65 ವ್ಯತ್ಯಾಸ ಗೋಚರವಾಗಲಿದೆ. ಇದೇ ವರ್ಷದ ಜನವರಿ 6 ರಂದು ಸಂಪೂರ್ಣ ಚಂದ್ರಗಹಣ ಸಂಭವಿಸಿತ್ತು.

ಗ್ರಹಣದ ಸಮಯ
ಸ್ಪರ್ಶಕಾಲ : ರಾತ್ರಿ 1.30 ಕ್ಕೆ.
ಮಧ್ಯಕಾಲ : ರಾತ್ರಿ 3.00 ಕ್ಕೆ
ಮೋಕ್ಷಕಾಲ : ರಾತ್ರಿ 4.30 ಕ್ಕೆ

Leave a Reply

Your email address will not be published. Required fields are marked *