Crime
ಪ್ರಿಯಕರನೊಂದಿಗೆ ಸೇರಿ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಪ್ರಾಪ್ತೆ ಅರೆಸ್ಟ್

ಲಕ್ನೋ: ತಂದೆಯನ್ನು ಕೊಂದ ಆರೋಪದ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮಗಳಿಂದ ಕೊಲೆಯಾದ ದುರ್ದೈವಿ ತಂದೆಯನ್ನು ತಬ್ರೆಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಈತನನ್ನು ಡಿಸೆಂಬರ್ 28 ರಂದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ಡಿಸೆಂಬರ್ 28 ರಂದು ಸಿಹೋರ್ವಾ ಗ್ರಾಮದಲ್ಲಿ ಮೃತ ದೇಹ ಪತ್ತೆಯಾಗಿದೆ. ಕೊಡಲಿಯಿಂದ ಕುತ್ತಿಗೆ ಕತ್ತರಿಸಿ ಕೊಲೆ ಮಾಡಲಾಗಿತ್ತು. ಈ ಘಟನೆ ಡಿಸೆಂಬರ್ 28 ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಕಿಲ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಈ ಪ್ರಕರಣವನ್ನು ಬಹಿರಂಗಪಡಿಸಲು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದರು. ಈಗ ಕೊಲೆ ಮಾಡಿದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೊಲೆಯಾದ ವ್ಯಕ್ತಿಯ ಅಪ್ರಾಪ್ತ ಮಗಳು ಮತ್ತು ಅವಳ ಪ್ರೇಮಿ ರೆಹಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ತಬ್ರೆಜ್ ಅಹ್ಮದ್ ಮಗಳು ರೆಹಾನ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಅವಳ ತಂದೆಗೆ ತಿಳಿದಿತ್ತು. ನಂತರ ತನ್ನ ಮಗಳ ವಿದ್ಯಾಭ್ಯಾಸವನ್ನು ನಿಲ್ಲಿಸಿ ಮನೆಯಲ್ಲಿರಲು ಮಗಳಿಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಮಗಳು ಆಕೆಯ ಪ್ರಿಯಕರನೊಂದಿಗೆ ಸೇರಿ ತಂದೆಯ ಪ್ರಾಣ ತೆಗೆಯಲು ಯೋಚಿಸಿದ್ದಾಳೆ.
ತಂದೆ ಎಲ್ಲಿಗೆ ಹೋಗುತ್ತಾರೆ, ಎಲ್ಲಿ ಕೆಲಸ ಮಾಡುತ್ತಾರೆ, ಯಾವ ಸಮಯಕ್ಕೆ ಬರುತ್ತಾರೆ ಎಂಬುದರ ಬಗ್ಗೆ ಎಲ್ಲ ಮಾಹಿತಿಯನ್ನು ಕೊಡುತ್ತಾ ತಂದೆಯ ಪ್ರಾಣ ತೆಗೆಯಲು ಗೆಳೆಯನೊಂದಿಗೆ ಪ್ಲ್ಯಾನ್ ಮಾಡಿದ್ದಾಳೆ. ಒಂದು ದಿನ ಮೃತ ತಬ್ರೆಜ್ ಹಳ್ಳಿಯಲ್ಲಿರುವ ತನ್ನ ಹಳೆಯ ಮನೆಯನ್ನು ರಿಪೇರಿ ಮಾಡುತ್ತಿದ್ದನು. ಆದ್ದರಿಂದ ಅವನು ಕಳೆದ ಕೆಲವು ದಿನಗಳಿಂದ ರಾತ್ರಿ ತನ್ನ ಮನೆಗೆ ಬಂದು ಪಕ್ಕದ ಮನೆಯಲ್ಲಿ ಮಲಗಿರುತ್ತಿದ್ದನು. ಈ ವಿಚಾರವನ್ನು ತಿಳಿದ ಮಗಳ ಪ್ರಿಯಕರ ಕೊಡಲಿಯಿಂದ ತಬ್ರೆಜ್ ಅಹ್ಮದ್ ತಲೆಗೆ ಹೊಡೆದಿದ್ದಾನೆ. ಜನರು ಸೇರುತ್ತಾರೆ ಎಂಬ ಭಯದಿಂದ ರೆಹಾನ್ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತಾಗಿ ತನಿಖೆ ನಡೆಸುತ್ತಿರುವ ಪೆÇಲೀಸರಿಗೆ ಹಲವು ಸುಳಿವುಗಳ ಮೂಲಕವಾಗಿ ಕೊಲೆಯಾದ ವ್ಯಕ್ತಿಯ ಮಗಳ ಪ್ರೀತಿಯ ವಿಚಾರ ತಿಳಿದು ವಿಚಾರಿಸಿದಾಗ ನಿಜಾಂಶ ಪ್ರಕಟವಾಗಿದೆ. ಆರೋಪಿ ರಹಾನ್ ಮತ್ತು ಅವನಿಗೆ ಸಹಾಯ ಮಾಡಿದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ.
