Connect with us

Crime

ಲಕ್ನೋ, ಕೋಲ್ಕತಾದಲ್ಲಿ ಐವರು ಉಗ್ರರ ಅರೆಸ್ಟ್

Published

on

Share this

ಲಕ್ನೋ: ದೇಶದಲ್ಲಿ ಆತ್ಮಾಹುತಿ ದಾಳಿ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಹೂಡಿದ್ದ ಉಗ್ರರನ್ನ ಸಂಚನ್ನ ಎಟಿಎಸ್ ಭೇದಿಸಿದೆ. ಉತ್ತರ ಪ್ರದೇಶದ ಲಖನೌದಲ್ಲಿ ಇಬ್ಬರು, ಕೋಲ್ಕತಾದಲ್ಲಿ ಶಂಕಿತ ಮೂವರನ್ನು ಎಸ್‍ಟಿಎಫ್ ಬಂಧಿಸಿದೆ.

ಅಲ್‍ಖೈದಾ ಉಗ್ರರ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ 11 ಸರ್ಕಾರಿ ಅಧಿಕಾರಿಗಳನ್ನು ಜಮ್ಮು ಕಾಶ್ಮೀರ ಸರ್ಕಾರ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಮತ್ತಷ್ಟು ರೇಡ್ ಮಾಡಿರುವ ಎಟಿಎಸ್ ಅಲ್‍ಖೈದಾ ಸಂಪರ್ಕ ಹೊಂದಿದ್ದ ಇಬ್ಬರನ್ನು ಬೇಟೆಯಾಡಿದೆ. ಇಬ್ಬರಿಗೆ ಪಾಕಿಸ್ತಾನ, ಅಫ್ಘಾನಿಸ್ತಾನದ ಉಗ್ರರ ನಂಟಿರುವ ಸಾಧ್ಯತೆ ಇದೆ. ಕೋಲ್ಕತಾದಲ್ಲಿ ಬಾಂಗ್ಲಾದೇಶದ ಉಗ್ರ ಸಂಘಟನೆ ಜೆಎಂಬಿ ಜೊತೆ ನಂಟಿರುವ ಶಂಕೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನಭೋ ಮಂಡಲಕ್ಕೆ ವರ್ಜಿನ್ ರಾಕೆಟ್ ಟೆಕಾಫ್ – ಗಗನಕ್ಕೆ ಹಾರಿದ ರಿಚರ್ಡ್ ಬ್ರಾನ್ಸನ್, ಶಿರಿಷಾ ಸಹಿತ 6 ತಜ್ಞರು

ಕಾಶ್ಮೀರದಲ್ಲಿ ನಿಷೇಧಿತ ಐಎಸ್‍ಐಎಸ್ ಉಗ್ರ ಸಂಘಟನೆಯ ಸಿದ್ಧಾಂತದ ಪ್ರಚಾರದ ಸಂಬಂಧ ಎನ್‍ಐಎ, ಶ್ರೀನಗರ, ಅನಂತ್ ನಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಮತ್ತೊಂದೆಡೆ, ಅಫ್ಗಾನಿಸ್ತಾನದ ಪಶ್ಚಿಮ ಭಾಗದ ಬಹುತೇಕ ಭಾಗಗಳನ್ನು ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ದಕ್ಷಿಣ ಭಾಗದ ಪ್ರದೇಶದತ್ತ ಮುನ್ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಹಾರ್ ಜಿಲ್ಲೆಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಸುಮಾರು 50 ರಾಜತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಯನ್ನು ಭಾರತ ಮರಳಿ ಸ್ವದೇಶಕ್ಕೆ ಕರೆಸಿಕೊಂಡಿದೆ. ಇದನ್ನೂ ಓದಿ: ಪುದುಚೇರಿ ಸಿಎಂ ಸಂಪುಟ ರಚನೆ- 13 ಖಾತೆಗಳನ್ನು ಇಟ್ಟುಕೊಂಡ ಎನ್.ರಂಗಸ್ವಾಮಿ

Click to comment

Leave a Reply

Your email address will not be published. Required fields are marked *

Advertisement