Crime
ಸೂಟ್ಕೇಸ್ಗೆ ಚಿನ್ನದ ಸ್ಕ್ರೂ- ದುಬೈನಿಂದ ಬಂದ ಪ್ರಯಾಣಿಕ ಅರೆಸ್ಟ್
– ಸೂಟ್ಕೇಸ್ಗೆ ಹಾಕಿದ್ದ 46 ಚಿನ್ನದ ಸ್ಕ್ರೂ ವಶಕ್ಕೆ
ಲಕ್ನೋ: ಸೂಟ್ಕೇಸ್ ಗೆ ಸಾಮಾನ್ಯ ಸ್ಕ್ರೂಗಳ ಬದಲಾಗಿ ಚಿನ್ನದ ಸ್ಕ್ರೂ ಹಾಕಿ ದುಬೈನಿಂದ ಬಂದಿದ್ದ ಪ್ರಯಾಣಿಕನನ್ನು ಲಕ್ನೋ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಎಫ್ಝೆಜ್ 8325 ವಿಮಾನದಲ್ಲಿ ದುಬೈನಿಂದ ಲಕ್ನೋಗೆ ಬಂದಿಳಿದಿದ್ದನು. ಸೂಟ್ಕೇಸ್ ಕೆಳಭಾಗದಲ್ಲಿ ಸ್ಕ್ರೂ ಅಳವಡಿಸಿದ್ದರಿಂದ ಯಾರಿಗೂ ತಿಳಿಯಲ್ಲ ಅಂತ ಧೈರ್ಯವಾಗಿ ಬಂದಿಳಿದ ಪ್ರಯಾಣಿಕ ಕಸ್ಟಮ್ಸ್ ಅಧಿಕಾರಿಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಬಂಧಿತನಿಂದ 180.50 ಗ್ರಾಂ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಅರೋಪಿ ತನ್ನ ಎರಡು ಟ್ರಾಲಿ ಬ್ಯಾಗ್ಗಳಿಗೆ ಚಿನ್ನದಿಂದ ಮಾಡಿದ ಸ್ಕ್ರೂ ಹಾಕಿದ್ದನು. ಎರಡು ಬ್ಯಾಗ್ ಗಳಿಗೆ 46 ಸ್ಕ್ರೂ ಹಾಕಲಾಗಿತ್ತು. ಒಟ್ಟು 9 ಲಕ್ಷ 54 ಸಾವಿರ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.