Karnataka
ಮತ್ತೊಬ್ಬಳ ಜೊತೆ ಪ್ರಿಯಕರನ ಸುತ್ತಾಟ- ನೊಂದ ಪ್ರಿಯತಮೆ ಆತ್ಮಹತ್ಯೆ

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಪ್ರಿಯಕರ ಕೈಕೊಟ್ಟ ಕಾರಣ ಪ್ರಿಯತಮೆ ನೇಣಿಗೆ ಶರಣಾದ ಘಟನೆ ಮೈಸೂರಲ್ಲಿ ನಡೆದಿದೆ.
ರಷ್ಮಿ(26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೈಸೂರಿನ ರಾಘವೇಂದ್ರ ನಗರದಲ್ಲಿ ಘಟನೆ ನಡೆದಿದ್ದು, ಯುವತಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್ ನೋಟ್ ನಲ್ಲಿ ಪ್ರಿಯಕರ ಅಕ್ಷಿತ್ ಕುಮಾರ್, ಪ್ರಿಯಕರನ ತಾಯಿ ಲಕ್ಷ್ಮಿ ಹಾಗೂ ಅಕ್ಷಿತ್ ಕುಮಾರ್ ನ ಹೊಸ ಗರ್ಲ್ ಫ್ರೆಂಡ್ ವರ್ಷಿಣಿ ಹೆಸರು ಉಲ್ಲೇಖಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರಷ್ಮಿ ಹಾಗೂ ಅಕ್ಷಿತ್ ಕುಮಾರ್ ನಡುವೆ ಪ್ರೇಮವಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ರಷ್ಮಿಯನ್ನು ಅಕ್ಷಯ್ ಕುಮಾರ್ ಮದುವೆ ಆಗುವುದಾಗಿ ನಂಬಿಸಿದ್ದ. ಕಳೆದ 15 ದಿನಗಳಿಂದ ವರ್ಷಿಣಿ ಜೊತೆ ಅಕ್ಷಿತ್ ಕುಮಾರ್ ಓಡಾಡುತ್ತಿದ್ದ. ಇದಕ್ಕೆ ಅಕ್ಷಿತ್ ಕುಮಾರ್ ತಾಯಿ ಲಕ್ಷ್ಮಿ ಪ್ರೋತ್ಸಾಹ ಸಹ ಇತ್ತು ಎಂದು ಡೆತ್ ನೋಟ್ ಬರೆಯಲಾಗಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
