Tuesday, 15th October 2019

Recent News

ದೈಹಿಕ ಸಂಬಂಧದ ವಿಡಿಯೋವನ್ನು ಅಪ್ರಾಪ್ತ ಪ್ರೇಯಸಿಗೆ ತೋರಿಸಿ ಪ್ರಿಯಕರನಿಂದ ಬ್ಲಾಕ್‍ಮೇಲ್!

ಭುವನೇಶ್ವರ್: ತನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ವಿಡಿಯೋವನ್ನು ಪ್ರೇಯಸಿಗೆ ತೋರಿಸಿ ಪ್ರಿಯಕರನೊಬ್ಬ ಬ್ಲಾಕ್‍ಮೇಲ್ ಮಾಡುತ್ತಿದ್ದ ಘಟನೆ ಒಡಿಶಾದಲ್ಲಿ ನಡೆದಿದ್ದು, ಸದ್ಯ ಕಟಕ್ ಮಹಿಳಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸಿದ್ಧಾಂತ್ ಕುಮಾರ್ ಬಿಸ್ವಾಲ್ ಅಲಿಯಾಸ್ ನಿಕ್ಕಿ(27) ಅಪ್ರಾಪ್ತೆ ಮೇಲೆ ಅತ್ಯಾಚಾರ ಹಾಗೂ ಬ್ಲಾಕ್ ಮೇಲ್ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.

ಪೊಲೀಸರು ಅಶ್ಲೀಲ ವಿಡಿಯೋವಿರುವ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ನನ್ನು ವಶ ಪಡೆದುಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆಗೆಂದು ಆರೋಪಿ ಹಾಗೂ ಸಂತ್ರಸ್ತೆಯನ್ನು ಎಸ್‍ಸಿಬಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ಕಳುಹಿಸಿದ್ದಾರೆ.

ವರದಿಗಳ ಪ್ರಕಾರ ಸಿದ್ಧಾಂತ್ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಹೇಳಿ ಆಕೆಯ ಜೊತೆ ಗುರುದಿಜಟಿಯಾ ಕಾಡಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದನು. ಅಲ್ಲದೇ ಆಕೆಗೆ ತಿಳಿಯದಂತೆ ಸಿದ್ಧಾಂತ್ ತನ್ನ ಮೊಬೈಲಿನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾನೆ ಎಂಬುದು ತಿಳಿದುಬಂದಿದೆ.

ಅಪ್ರಾಪ್ತೆ ಬೆಳೆದು ದೊಡ್ಡವಳಾದ ಬಳಿಕ ಸಿದ್ಧಾಂತ್ ನನ್ನು ಮದುವೆಯಾಗುವಂತೆ ಹೇಳಿದ್ದಾಳೆ. ಈ ವೇಳೆ ಆತ ಆಕೆಯೊಂದಿಗೆ ದೈಹಿಕ ಸಂಪರ್ಕದ ವಿಡಿಯೋವನ್ನು ತೋರಿಸಿ ಬ್ಲಾಕ್‍ಮೇಲ್ ಮಾಡಿದ್ದಾನೆ. ಸದ್ಯ ಆರೋಪಿ ಸಿದ್ಧಾಂತ್‍ನನ್ನು ಶುಕ್ರವಾರ ಕಟಕ್ ಮಹಿಳಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *