Connect with us

Crime

ತನ್ನ ಪ್ರೀತಿ ನಿರಾಕರಿಸಿದ 33ರ ಮಹಿಳೆಗೆ ಆ್ಯಸಿಡ್ ಎರಚಿದ 50ರ ವ್ಯಕ್ತಿ!

Published

on

– ಪ್ರೇಮಿಗಳ ದಿನದಂದೇ ಸೇಡು ತೀರಿಸಿಕೊಂಡ

ಡಿಸ್ಪುರ್: ತನ್ನ ಪ್ರೇಮ ನಿವೇದನೆಯನ್ನು ನಿರಾಕರಿಸಿದ 33 ವರ್ಷದ ಮಹಿಳೆ ಮೇಲೆ ಪ್ರೇಮಿಗಳ ದಿನದಂದೇ 50 ವರ್ಷ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿದ ಘಟನೆ ಅಸ್ಸಾಂನ ದಿಬುರ್ಗಡ್ ಜಿಲ್ಲೆಯ ಮಿರ್ಜಾಬಾಗ್ ಪ್ರದೇಶದಲ್ಲಿ ನಡೆದಿದೆ.

ವ್ಯಕ್ತಿಯನ್ನು ಬುದ್ಧದೇವ್ ದಾಸ್ ಎಂದು ಗುರುತಿಸಲಾಗಿದೆ. ಈತ ದಿಬುರ್ಗರ್ ನ ಶಾಂತಿಪರ ನಿವಾಸಿ. ಮಹಿಳೆ ತನ್ನ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬುದ್ಧದೇವ್ ಆಕೆಯ ಮೇಲೆ ದಾಳಿ ಮಾಡಿದ್ದಾನೆ.

ವರದಿಗಳ ಪ್ರಕಾರ, ಮಹಿಳೆಯ ಬಳಿ ವ್ಯಕ್ತಿ ತನ್ನನ್ನು ಮದುವೆಯಾಗುವಂತೆ ಹೇಳಿದ್ದಾನೆ. ಆದರೆ ಈತನ ಮಾತನ್ನು ಮಹಿಳೆ ನಿರಾಕರಿಸಿದ್ದಾಳೆ. ಇದೇ ಸಿಟ್ಟಿನಿಂದ ಬುದ್ಧದೇವ್ ಮಹಿಳೆಯ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಗಾಯಗೊಂಡಿರುವ ಮಹಿಳೆಯನ್ನು ಕೂಡಲೇ ಸ್ಥಳೀಯರು ಅಸ್ಸಾಂ ಮೆಡಿಕಲ್ ಕಾಲೇಜ್ ಆ್ಯಂಡ್ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ. ವ್ಯಕ್ತಿಯ ಪ್ರೇಮ ನಿವೇದನೆಯನ್ನು ಮಹಿಳೆ ನಿರಾಕರಿಸಿದ್ದಳು. ಇದು ಬುದ್ಧದೇವ್ ಸಿಟ್ಟಿಗೆ ಕಾರಣವಾಗಿತ್ತು. ಇದೇ ಸಿಟ್ಟಿನಿಂದ ಆತ, ಭಾನುವಾರ ಮಹಿಳೆ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಆಕೆಯ ಮೇಲೆ ದಾಳಿ ಮಾಡಿ ಸೇಡು ತೀರಿಸಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

Click to comment

Leave a Reply

Your email address will not be published. Required fields are marked *