Wednesday, 16th October 2019

Recent News

ಪಾಗಲ್‍ಪ್ರೇಮಿಯ ಹುಚ್ಚಾಟದಿಂದ ಯುವತಿಯ ಸ್ಥಿತಿ ಗಂಭೀರ- 12 ಬಾರಿ ಇರಿದಿದ್ದ

-ಆಸ್ಪತ್ರೆಯಲ್ಲಿ ಕಣ್ಣ ಬಿಟ್ಟಾಗ ಪ್ರೇಯಸಿಯನ್ನ ಕೇಳಿದ ಪ್ರೇಮಿ

ಮಂಗಳೂರು: ಪಾಗಲ್ ಪ್ರೇಮಿಯಿಂದ ಯುವತಿಯ ಕೊಲೆ ಯತ್ನ ಪ್ರಕರಣದ ತನಿಖೆ ಚುರುಕುಗೊಂಡಿದೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆರೋಪಿಗೆ ಜೈಲ್ ವಾರ್ಡ್ ನಲ್ಲೇ ಚಿಕಿತ್ಸೆ ನಡೆಯುತ್ತಿದೆ.

ಸುಶಾಂತ್ ಪ್ರೇಯಸಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದನು. ಆರೋಪಿ ಸುಶಾಂತ್ ಇತ್ತೀಚಿಗಷ್ಟೇ 50 ಸಾವಿರ ರೂ. ಖರ್ಚು ಮಾಡಿ ಯುವತಿಯ ಹುಟ್ಟುಹಬ್ಬ ಆಚರಿಸಿದ್ದನು. ಇದಾದ ಮರುದಿನವೇ ಮಾನಸಿಕ ಕಿರುಕುಳದ ಆರೋಪ ಮಾಡಿ ಯುವತಿ ಸುಶಾಂತ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದನ್ನೂ ಓದಿ: ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

ಅಷ್ಟೇ ಅಲ್ಲದೇ ಸುಶಾಂತ್‍ನನ್ನ ಯುವತಿ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಸುಶಾಂತ್ ಪ್ರೇಯಸಿಯ ಕೊಲೆಗೆ ಎರಡು ದಿನಗಳ ಹಿಂದೆಯೇ ಸ್ಕೆಚ್ ಹಾಕಿದ್ದನು. ಅದರಂತೆಯೇ ಶುಕ್ರವಾರ ಸಮಯ ನೋಡಿ ಯುವತಿಯ ಮೇಲೆ ಅಟ್ಯಾಕ್ ಮಾಡಿ 12 ಬಾರಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದನು. ಸುಶಾಂತ್ ಈ ಕೃತ್ಯ ಎಸಗುವ ಮುನ್ನ ಗಾಂಜಾ ಸೇವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯಕ್ಕೆ ಆಸ್ಪತ್ರೆಯಿಂದ ಆರೋಪಿ ಸುಶಾಂತ್‍ನನ್ನು ಜೈಲ್ ವಾರ್ಡಿಗೆ ಶಿಫ್ಟ್ ಮಾಡಿದ್ದು, ಅಲ್ಲಿಯೇ ಸುಶಾಂತ್ ಚೇತರಿಕೆಯಾಗುತ್ತಿದ್ದಾನೆ. ಆದರೆ ಯುವತಿಗೆ ಅತಿಯಾಗಿ ರಕ್ತಸ್ರಾವ ಹೋಗಿದ್ದು, ಈಗಾಗಲೇ ರಕ್ತ ನೀಡಲಾಗಿದೆ. ಆದರೂ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯಕ್ಕೆ ಯುವತಿಗೆ ದೇರಳಕಟ್ಟೆಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಜೈಲ್ ವಾರ್ಡ್ ನಲ್ಲಿರುವ ಸುಶಾಂತ್ ಪಜ್ಞೆ ಬಂದ ಬಳಿಕ ಪ್ರೇಯಸಿ ಹೇಗಿದ್ದಾಳೆ ಎಂದು ಕೇಳಿದ್ದಾನೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *