Connect with us

Cinema

ಸಲ್ಮಾನ್ ವರ್ಕೌಟ್‍ಗೆ ಅಭಿಮಾನಿಯ ಪ್ರಶ್ನೆ

Published

on

ನವದೆಹಲಿ: ಲಾಕ್‍ಡೌನ್ ಹಿನ್ನೆಲೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ತಮ್ಮ ಪನ್ವೇಲ್ ಫಾರ್ಮ್‍ಹೌಸ್‍ನಲ್ಲೇ ಲಾಕ್ ಆಗಿದ್ದು, ಎಲ್ಲಿಯೂ ಹೋಗದಂತಾಗಿದೆ. ಆದರೂ ಹತಾಶೆಗೊಳಗಾಗದೇ ಸಲ್ಮಾನ್ ಫಾರ್ಮ್ ಹೌಸ್‍ನಲ್ಲಿ ಭರ್ಜರಿ ತಯಾರಿ ನಡೆಸಿದ್ದು, ಮುಂದಿನ ಸಿನಿಮಾಗೆ ಈಗಿನಿಂದಲೇ ತಯಾರಿ ನಡಸಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ.

ದಬಾಂಗ್ ಭಾಯ್ ಫಾರ್ಮ್ ಹೌಸ್‍ನಲ್ಲೇ ವೆಲ್ ಫರ್ನಿಶ್ಡ್ ಜಿಮ್ ಹೊಂದಿದ್ದು, ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಈ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಫುಲ್ ಮಜಲ್ ತೋರಿಸಿದ್ದಾರೆ. ಅಲ್ಲದೆ ಗಡ್ಡವನ್ನು ಸಹ ಬೆಳೆಸಿದ್ದಾರೆ. ಸಲ್ಮಾನ್ ಖಾನ್ ಅವರ ಈ ಲುಕ್ ನೋಡಿದ ಅಭಿಮಾನಿಗಳು, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದು, ಎಕ್ ಥಾ ಟೈಗರ್ ಬಳಿಕ ಇದರ ಸೀಕ್ವೆಲ್‍ಗೆ ಈಗಿನಿಂದಲೇ ತಯಾರಿ ನಡೆಸಿದ್ದೀರಾ, ಇದಕ್ಕಾಗಿಯೇ ವರ್ಕೌಟ್ ಮಾಡಿ ಮಸಲ್ ಮ್ಯಾನ್ ಆಗುತ್ತಿದ್ದಾರಾ ಏನು ಕಥೆ ಎಂದು ಪ್ರಶ್ನಿಸುತ್ತಿದ್ದಾರೆ.

 

View this post on Instagram

 

Jacky got caught taking a pic chori chori Chupke chupke… she took one more after that which she will post on her own! @jacquelinef143

A post shared by Salman Khan (@beingsalmankhan) on

ಸದ್ಯ ಸಲ್ಲು ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ಶೂಟಿಂಗ್ ಪೂರ್ಣಗೊಂಡ ಬಳಿಕ ಟೈಗರ್ ಸೀಕ್ವೆಲ್‍ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಸಹ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಮನೆಯಲ್ಲಿ ಕೆಲಸ ಮಾಡಲು ಇದು ನಿಮ್ಮನ್ನು ಖಂಡಿತವಾಗಿಯೂ ಪ್ರೇರೇಪಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ರಾಧೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವಾಗಲೇ ಲಾಕ್‍ಡೌನ್ ಘೋಷಣೆಯಾಗಿದ್ದು, ಕ್ಲೈಮ್ಯಾಕ್ಸ್ ಸೀನ್ ಗಾಗಿ ಸಲ್ಮಾನ್ ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾಗೆ ಡ್ಯಾನ್ಸರ್ ಹಾಗೂ ನಿರ್ದೇಶಕ ಪ್ರಭುದೇವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಲ್ಮಾನ್ ಖಾನ್ ತಮ್ಮ ತೂಕವನ್ನು ಹತೋಟಿಯಲ್ಲಿಟ್ಟಯಕೊಳ್ಳಲು ದೇಹ ದಂಡನೆ ಮಾಡುತ್ತಿದ್ದಾರೆ. ಲಾಕ್‍ಡೌನ್ ಮುಗಿಯುತ್ತಿದ್ದಂತೆ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ. ಕಾರ್ ಚೇಸ್ ಮಾಡುವ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಇದನ್ನು ಪೂರ್ಣಗೊಳಿಸಲಿದ್ದಾರೆ ಎನ್ನಲಾಗಿದೆ.

Click to comment

Leave a Reply

Your email address will not be published. Required fields are marked *