Connect with us

Bengaluru City

ಮಾಂಸ ಮಾರಾಟದಲ್ಲಿ ಗೊಂದಲ- ಬೆಂಗ್ಳೂರಲ್ಲಿ ಪರ್ಮಿಷನ್, ಜಿಲ್ಲೆಗಳಲ್ಲಿ ಕನ್‍ಫ್ಯೂಷನ್

Published

on

– ಮಂಡ್ಯದಲ್ಲಿ ಕೋಳಿ ಮಾರಂಗಿಲ್ಲ

ಬೆಂಗಳೂರು: ಹೊಸತೊಡಕಿನಲ್ಲಿ ಮಾಂಸ ಮಾರಾಟದಲ್ಲೂ ಗೊಂದಲ ಉಂಟಾಗಿದೆ. ಬೆಂಗಳೂರಿನಲ್ಲಿ ಲಾಕ್‍ಡೌನ್ ಆದೇಶದಂತೆ ಮಾಂಸ ಮಾರಾಟಕ್ಕೆ ಅವಕಾಶ ನೀಡಿದ್ರೆ, ಕೆಲ ಜಿಲೆಗಳಲ್ಲಿ ಗೊಂದಲ ಎದುರಾಗಿದೆ.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು, ಉಡುಪಿಯಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಕನಿಷ್ಠ ಅಂತರ ಕಾಯ್ದುಕೊಳ್ಳಬೇಕು, ಮುಗಿಬೀಳುವಂತ್ತಿಲ್ಲ ಎಂದು ಸೂಚನೆ ನೀಡಲಾಗಿದೆ.

ಭಾರತ ಲಾಕ್‍ಡೌನ್ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಿಲಾಗಿದೆ. ಯುಗಾದಿ ಹಬ್ಬದ ಮಾರನೇ ದಿನವಾದ ಇಂದು ಮಾಂಸ ಖರೀದಿಗೆ ಜನ ಹಿಂದೇಟು ಹಾಕಿದ್ದು, ಮಾಂಸದ ಮಾರುಕಟ್ಟೆಗಳಲ್ಲಿ ಜನ ವಿರಳವಾಗಿದ್ದಾರೆ. ಆದರೆ ಮಾಂಸ ಖರೀದಿಗೆ ಬಂದವರು ಸಾಮಾಜಿಕ ಅಂತರ ಕಾಪಾಡುವುದನ್ನು ಬಿಟ್ಟು ಕಾಟಾಚಾರಕ್ಕೆ ಸಾಮಾಜಿಕ ಅಂತರ ಎಂಬತೆ ವರ್ತಿಸುತ್ತಿದ್ದಾರೆ.

ರಾಯಚೂರಿನಲ್ಲಿ ಮಾಂಸವನ್ನು ಹೋಂ ಡೆಲಿವರಿ ಮಾಡಲು ಜಿಲ್ಲಾಧಿಕಾರಿ ಅವಕಾಶ ನೀಡಿದ್ದಾರೆ. ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಆದರೆ ಹಕ್ಕಿ ಜ್ವದ ಹಿನ್ನೆಲೆ ಮಂಡ್ಯದಲ್ಲಿ ಕೋಳಿ ಮಾರಾಟಕ್ಕೆ ಅನುಮತಿ ಇಲ್ಲ. ಜೊತೆಗೆ ಮಾಂಸ ಖರೀದಿಗೆ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಕೊರೊನಾ ಭೀತಿ ನಡುವೆಯೂ ಯುಗಾದಿ ವರ್ಷ ತೊಡಕಿಗೆ, ಹಾಸನದಲ್ಲಿ ಮಟನ್‍ಗೆ ಭರ್ಜರಿ ಬೇಡಿಕೆ ಶುರುವಾಗಿದ್ದು ಪೊಲೀಸ್ ಮತ್ತು ನಗರಸಭೆ ಸಿಬ್ಬಂದಿ ಜನರನ್ನು ನಿಯಂತ್ರಿಸುತ್ತಿದ್ದಾರೆ. ಮಾಸ್ಕ್ ಹಾಕಿದವರಿಗೆ ಮಾತ್ರ ಮಟನ್ ಮಾರ್ಕೆಟ್ ಒಳಗೆ ಬಿಡಲಾಗುತ್ತಿದೆ. ಜನ ಕೂಡ ಸರಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ಬರುವಂತೆ ಲೈನ್ ಹಾಕಲಾಗಿದೆ. ನೂರಾರು ಜನ ಸರತಿ ಸಾಲಲ್ಲಿ ನಿಂತು ಮಟನ್ ಖರೀದಿಸುತ್ತಿದ್ದಾರೆ.