Connect with us

Bengaluru City

ಚುನಾವಣಾ ಫಲಿತಾಂಶ- ಗೆಲುವಿನ ಸಂಭ್ರದಲ್ಲಿರೋರಿಗೆ ಮಳೆರಾಯ ಅಡ್ಡಿ

Published

on

ಬೆಂಗಳೂರು: “ಗೆಲುವು ನಮ್ದೇ” ಎಂದು ಎಲೆಕ್ಷನ್ ಕೌಂಟಿಂಗ್ ದಿನ ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡಬೇಕು, ರೋಡ್ ರೋಡ್‍ನಲ್ಲಿ ಸಂಭ್ರಮಾಚಾರಣೆ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡ ಪಕ್ಷದ ಅಭ್ಯರ್ಥಿಗಳಿಗೆ ಕಾರ್ಯಕರ್ತರಿಗೆ ಮಳೆರಾಯನ ಅಡ್ಡಿಯಾಗಲಿದೆ.

ಕೌಂಟಿಂಗ್ ದಿನ ಕರ್ನಾಟಕದಲ್ಲಿ ಮಳೆರಾಯನ ಭರ್ಜರಿ ಎಂಟ್ರಿಯ ಸೂಚನೆ ಸಿಕ್ಕಿದ್ದು, ಎಲೆಕ್ಷನ್ ಫಲಿತಾಂಶ ಸಂಭ್ರಮಾಚಾರಣೆಗೆ ವರುಣ ಅಡ್ಡಿಯಾಗಲಿದ್ದಾನೆ. 23ರಂದು ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಮಂಡ್ಯ, ಬೆಂಗಳೂರು, ಮೈಸೂರು, ಹಾಸನ, ತುಮಕೂರು, ಕರಾವಳಿ, ಮಲೆನಾಡು ಭಾಗಕ್ಕೆ ಗುಡುಗು ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

23 ರಿಂದ ಪ್ರಾರಂಭವಾದ ಮಳೆ 25ರವೆರೆಗೆ ರಾಜ್ಯದಲ್ಲಿ ಅಬ್ಬರಿಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಗೆಲುವಿನ ಸಂಭ್ರಮದ ಮೂಡ್‍ನಲ್ಲಿದ್ದವರಿಗೆ ವರುಣ ಭರ್ಜರಿ ಶಾಕ್ ಕೊಡುವುದಕ್ಕೆ ರೆಡಿಯಾಗಿದ್ದಾನೆ.