Connect with us

Hassan

ಕಾರ್ ಬಂದರೂ ಕ್ಯಾರೆ ಎನ್ನದ ಚಿರತೆ- ವಿಡಿಯೋ ವೈರಲ್

Published

on

– ಕಾರು ಬಂದರೂ ಗಂಭೀರವಾಗಿ ಕುಳಿತ ಚಿರತೆ

ಹಾಸನ: ಕಾರು ಬರುತ್ತಿರುವ ವೇಳೆ ಲೈಟ್ ಬೆಳಕು ಬಿದ್ದರೂ ಚಿರತೆ ಒಂಚೂರು ಅಲ್ಲಾಡದೆ ಅಷ್ಟೇ ಗಾಂಭೀರ್ಯದಿಂದ ಗುರಾಯಿಸುವ ಮೂಲಕ ವಾಹನ ಸವಾರರನ್ನು ಬೆಚ್ಚಿ ಬೀಳಿಸಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಅರಸೀಕೆರೆ ತಾಲೂಕಿನ, ರಾಮನಹಳ್ಳಿ ಅರಣ್ಯವಲಯದಲ್ಲಿ ಚಿರತೆಯೊಂದು ರಸ್ತೆ ಬದಿ ಕುಳಿತಿದ್ದು, ಪ್ರಯಾಣಿಕರ ಮೊಬೈಲ್‍ನಲ್ಲಿ ಚಿರತೆ ವಿಡಿಯೋ ಸೆರೆಯಾಗಿದೆ. ಸ್ಥಳೀಯರಾದ ರಮೇಶ್ ಹಾಗೂ ಮುನೇಶ್ ಅವರು ಕಾರಿನಲ್ಲಿ ಹೋಗುವಾಗ ರಸ್ತೆ ಬದಿ ಕುಳಿತಿರುವ ಚಿರತೆಯನ್ನು ನೋಡಿ ಕಾರು ನಿಲ್ಲಿಸಿದ್ದಾರೆ. ಕಾರು ನಿಲ್ಲಿಸಿದರೂ ಸಹ ಚಿರತೆ ತನ್ನ ಪಾಡಿಗೆ ತಾನು ಕುಳಿತಿದೆ. ಈ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಲೈಟ್ ಬೆಳಕಿಗೂ ಹೆದರದೆ, ರೈಸ್ ಮಾಡಿದರೂ ಅಲ್ಲಾಡದೆ ಚಿರತೆ ಕುಳಿತಿದೆ. ಕೊನೆಗೆ ಕಾರ್ ನ ಹಾರನ್ ಮಾಡಿದಾಗ ಚಿರತೆ ತನ್ನ ಪಾಡಿಗೆ ತಾನು ಎದ್ದು ಕಾಡಿನೊಳಗೆ ನಡೆಯುತ್ತ ಮರೆಯಾಗಿದೆ. ಸುಮಾರು ಒಂದು ನಿಮಷ ಇಪ್ಪತ್ತು ಸೆಕೆಂಡ್ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಮನಹಳ್ಳಿ ಅರಣ್ಯವಲಯದ ವ್ಯಾಪ್ತಿಯಲ್ಲಿ ಚಿರತೆಗಳು ಹೆಚ್ಚಾಗಿದ್ದು, ರಾತ್ರಿ ವೇಳೆ ಈ ಭಾಗದಲ್ಲಿ ಬೈಕ್‍ನಲ್ಲಿ ಸಂಚರಿಸುವವರು ಎಚ್ಚರಿಕೆದಿಂದ ಇರಬೇಕು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *