Thursday, 16th August 2018

Recent News

ಕೊನೆಗೂ ನಿಗದಿಯಾಯ್ತು ದೀಪಿಕಾ- ರಣ್‍ವೀರ್ ಮದುವೆ ದಿನಾಂಕ!

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ರಣ್‍ವೀರ್ ಸಿಂಗ್ ಜೊತೆ ದೀಪಿಕಾ ಇದೇ ವರ್ಷದಲ್ಲಿ ಮದುವೆಯಾಗಲಿದ್ದು, ಕೊನೆಗೂ ಅವರ ಮದುವೆಯ ದಿನಾಂಕ ನಿಗದಿಯಾಗಿದೆ.

ನವೆಂಬರ್ 19ರಂದು ಮುಂಬೈನಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮದುವೆಯಾಗಲಿದ್ದಾರೆ. ನವೆಂಬರ್ 18ರಿಣದ 20ರವರೆಗೂ ಮೂರು ದಿನಗಳ ಕಾಲ ಮದುವೆ ಕಾರ್ಯಕ್ರಮಗಳು ಜರುಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವರದಿಗಳ ಪ್ರಕಾರ ರಣ್‍ವೀರ್ ಹಾಗೂ ದೀಪಿಕಾ ಪಡುಕೋಣೆ ಜುಲೈ ತಿಂಗಳಲ್ಲೇ ಮದುವೆಯಾಗಬೇಕಿತ್ತು. ಆದರೆ ಇಬ್ಬರೂ ತಮ್ಮ ಕೆಲಸಗಳಲ್ಲಿ ಬ್ಯುಸಿಯಿದ್ದ ಕಾರಣ ಅವರು ತಮ್ಮ ಮದುವೆಯನ್ನು ನವೆಂಬರ್ ತಿಂಗಳಿಗೆ ಮುಂದೂಡಿದ್ದಾರೆ.

ದೀಪಿಕಾ ಪೋಷಕರು ಮಗಳ ಮದುವೆಗಾಗಿ ಮುಂಬೈನಿಂದ ಬೆಂಗಳೂರಿಗೆ ತಲುಪಿದ್ದಾರೆ. ಈಗ ದೀಪಿಕಾ ತನ್ನ ಪೋಷಕರ ಜೊತೆ ಸೇರಿ ಬೆಂಗಳೂರಿನ ಪ್ರತಿಷ್ಟಿತ ಆಭರಣ ಮಳಿಗೆಯಲ್ಲಿ ಮದುವೆಯ ಶಾಪಿಂಗ್‍ನಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಮದುವೆ ಬಗ್ಗೆ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ “ಮನಸ್ಸಿನಲ್ಲಿ ನಾನು ಮದುವೆ ಬಗ್ಗೆ ಯೋಚಿಸುತ್ತಿದ್ದೇನೆ” ಎಂದು ರಣ್‍ವೀರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *