Connect with us

Bidar

ಪಂಚಾಯಿತಿ ಅಧಿಕಾರಿಗಳ ಗೋಲ್ಮಾಲ್ – ಬಡವರಿಗೆ ಸೇರಬೇಕಿದ್ದ ಜಮೀನು ಖಾಸಗಿ ವ್ಯಕ್ತಿ ಪಾಲು

Published

on

– ಕೋಟ್ಯಂತರ ರೂ. ಜಮೀನು ಖಾಸಗಿಯವರಿಗೆ

ಬೀದರ್: ಸರ್ಕಾರ ಬಡ ಫಲಾನುಭವಿಗಳಿಗೆ ನೀಡಿದ್ದ ಸಿ-ಫಾರ್ಮ್ ಜಮೀನನ್ನು ಪಂಚಾಯಿತಿ ಅಧಿಕಾರಿಗಳು ಖಾಸಗಿ ವ್ಯಕ್ತಿ ಬಳಿ ಕೋಟ್ಯಂತರ ರೂ. ಹಣ ಪಡೆದು ಮಾರಿದ್ದಾರೆ ಎನ್ನುವ ಆರೋಪ ಬಸವಕಲ್ಯಾಣ ತಾಲೂಕಿನಲ್ಲಿ ಕೇಳಿಬಂದಿದೆ.

ಪಂಚಾಯತಿ ಅಧಿಕಾರಿಗಳ ಭಾರೀ ಗೋಲ್ಮಾಲ್ ನಿಂದ ಬಡ ಫಲಾನುಭವಿಗಳಿಗೆ ಸೇರಬೇಕಿದ್ದ ಸಿ-ಫಾರ್ಮ್ ಜಮೀನು ಖಾಸಗಿ ವ್ಯಕ್ತಿ ಪಾಲಾಗಿದ್ದು, ಪಂಚಾಯಿತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಸಿ-ಫಾರ್ಮ್ ಜಮೀನನ್ನು ಹಬೀಬಖಾನ್ ಎಂಬ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ್ದು, ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಪಂಚಾಯತಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಜಮೀನು ರಾಷ್ಟ್ರೀಯ ಹೆದ್ದಾರಿ 9ರ ಬಳಿ ಇದ್ದು, ಕೋಟ್ಯಂತರ ಬೆಲೆ ಬಾಳುವ ಜಮೀನಾಗಿದೆ. ಹೀಗಾಗಿ ಪಿಡಿಓ ಚಂದ್ರಮ ಈ ಜಮೀನನ್ನು ಖಾಸಗಿ ವ್ಯಕ್ತಿ ಹೆಸರಿಗೆ ಪರಭಾರೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿರುವ ಕುರಿತು ಪಹಣಿ ಕೂಡ ಲಭ್ಯವಾಗಿದ್ದು, ಸಿ- ಫಾರ್ಮ್ ನಲ್ಲಿ ಜಾಗ ಪಡೆದಿದ್ದ ಬಡ ಫಲಾನುಭವಿಗಳು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಬಡವರ ಜಮೀನು ಏಕಾಏಕಿ ಖಾಸಗಿ ವ್ಯಕ್ತಿ ಹೆಸರಿಗೆ ಮಾಡಿ ಅಧಿಕಾರಿಗಳು ಕೋಟ್ಯಂತರ ರೂ.ಗಳ ಗೋಲ್ಮಾಲ್ ಮಾಡಿದ್ದಾರೆ ಎಂದು ಫಲಾನುಭವಿಗಳು ನ್ಯಾಯ ಒದಗಿಸುವಂತೆ ಗೋಳಾಡುತ್ತಿದ್ದಾರೆ.