ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲೂ ಪ್ರಸಾದ್ ಪುತ್ರ ತೇಜಸ್ವಿ ಯಾದವ್

Advertisements

ನವದೆಹಲಿ: ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಕೊನೆಯ ಪುತ್ರ ತೇಜಸ್ವಿ ಯಾದವ್ ಬಾಲ್ಯದ ಗೆಳತಿ ರಾಜೇಶ್ವರಿ,ಎಕೆಎ ರೇಚೆಲ್ ಅವರ ಜೊತೆಗೆ ದಾಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisements

ತೇಜಸ್ವಿ ಯಾದವ್ ಹರಿಯಾಣ ಮೂಲದ ತಮ್ಮ ಬಾಲ್ಯದ ಗೆಳತಿ ರಾಜೇಶ್ವರಿ, ಎಕೆಎ ರೇಚೆಲ್ ಅವರನ್ನು ಇಂದು ನವದೆಹಲಿಯಲ್ಲಿ ವಿವಾಹವಾಗಿದ್ದಾರೆ. ರಾಜೇಶ್ವರಿ ಮತ್ತು ತೇಜಸ್ವಿ ಇಬ್ಬರೂ ದೆಹಲಿಯ ಆಕೆಎ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‍ನಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದರು ಮತ್ತು ಈಗ 6-7 ವರ್ಷಗಳಿಂದ ಸ್ನೇಹಿತರಾಗಿದ್ದರು ಎನ್ನಲಾಗಿದೆ.

Advertisements

ಗುರುವಾರ ಬೆಳಗ್ಗೆ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಮದುವೆ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಂಡಿತ್ತು. ಆದರೆ ರಾಜೇಶ್ವರಿ ಸಹೋದರಿ ರೋಹಿಣಿ ಆಚಾರ್ಯ ತಮ್ಮ ಟ್ವಿಟ್‌ನಲ್ಲಿ ವಿವಾಹದ ಫೋಟೋ ಹಂಚಿಕೊಂಡು ಶುಭಾಶಯ ಕೋರಿದಾಗ ಮದುವೆ ವಿಚಾರ ಬಹಿರಂಗವಾಗಿದೆ.

ನಾನು ನಿನ್ನ ಮದುವೆಯಲ್ಲಿ ಇಲ್ಲ. ಆದರೆ ನನ್ನ ಆಶೀರ್ವಾದ ನಿಮ್ಮಿಬ್ಬರ ಮೇಲಿದೆ. ಟುಟು ಮತ್ತು ರೇಚೆಲ್‍ಗೆ ಮದುವೆಯ ಶುಭಾಶಯಗಳು ನಿಮ್ಮಿಬ್ಬರ ಜೀವನ ಉಸಿರಿರುವವರೆಗೂ ಸಂತೋಷವಾಗಿರಲೆಂದು ಆಶಿಸುತ್ತೇನೆ ಎಂದು ಟ್ವಿಟ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ – ವೀಡಿಯೋ ವೈರಲ್

Advertisements

ತೇಜಸ್ವಿ ಯಾದವ್ ಮದುವೆಯಲ್ಲಿ ಕೇವಲ 50 ಮಂದಿ ಮಾತ್ರ ಭಾಗಿಯಾಗಿದ್ದಾರೆ. ಆಮಂತ್ರಿತರಿಗೆ ಮಾತ್ರ ಮದುವೆಗೆ ಅವಕಾಶ ನೀಡಲಾಗಿತ್ತು. ದೆಹಲಿಯ ಸೈನಿಕ್ ಫಾಮ್ರ್ಸ್‍ನಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್, ರಾಜ್ಯಸಭಾ ಸಂಸದೆ ಮಿಸಾ ಭಾರತಿ ಇತರರು ಸೇರಿದಂತೆ ಉನ್ನತ ರಾಜಕೀಯ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರತಿಭಟನೆ ಮುಂದುವರಿಯಲಿದೆ: ನಾಳೆ ಮತ್ತೆ ರೈತರ ಸಭೆ

 

Advertisements
Exit mobile version