Connect with us

Corona

ಲಕ್ಷ್ಮಿ ನಾರಾಯಣ ಜಾತ್ರೆಗೂ ಕೊರೊನಾ ಬಿಸಿ- 117 ವರ್ಷದ ಉತ್ಸವಕ್ಕೆ ಬ್ರೇಕ್

Published

on

ಧಾರವಾಡ: ಕೊರೊನಾ ಹಿನ್ನೆಲೆ ನಗರದ ಲಕ್ಷ್ಮಿ ನಾರಾಯಣ ದೇವಸ್ಥಾನದ ಜಾತ್ರೆಗೆ ಈ ವರ್ಷ ನಿರ್ಬಂಧ ಹೇರಲಾಗಿದೆ. ಈ ಮೂಲಕ 117 ವರ್ಷಗಳ ಜಾತ್ರೆಗೆ ಈ ವರ್ಷ ಬ್ರೇಕ್ ಬಿದ್ದಂತಾಗಿದೆ.

ಕಳೆದ 117 ವರ್ಷಗಳಿಂದ ಧಾರವಾಡ ನಗರದ ರವಿವಾರ ಪೇಟೆಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಪಾರಂಪರಿಕವಾಗಿ ಜಾತ್ರೆಯನ್ನು ಆಚರಿಸುತ್ತ ಬಂದಿದ್ದರು. ಅತ್ಯಂತ ವಿಜ್ರಂಭಣೆಯಿಂದ ಮಾಡಲಾಗುವ ದಸರಾ ಹಬ್ಬದ ವೇಳೆಯೇ ಲಕ್ಷ್ಮಿ ನಾರಾಯಣ ಜಾತ್ರೆಯನ್ನು ಮಾಡುವ ಈ ಸಂಪ್ರದಾಯಕ್ಕೆ ಕೊರೊನಾದಿಂದಾ ತಡೆಯಾಗಿದೆ. ಪ್ರತಿ ವರ್ಷ ಒಂದು ತಿಂಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದರು. ಅಲ್ಲದೆ ಹೊರ ರಾಜ್ಯದ ವ್ಯಾಪಾರಿಗಳು ಬಂದು ಅಂಗಡಿಗಳನ್ನು ಹಾಕುತ್ತಿದ್ದರು.

ಒಟ್ಟು 10 ದಿನಗಳ ಕಾಲ ದೇವಸ್ಥಾನದಲ್ಲಿ ವಿವಿಧ ಅಲಂಕಾರ, ಪೂಜೆ ನಡೆಯುತ್ತಿತ್ತು. ಈ ಪೂಜೆಗೆ ಪ್ರತಿ ದಿನ 10 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ದರ್ಶನ ಪಡೆಯುತಿದ್ದರು. ಆದರೆ ಕೊರೊನಾ ಹಿನ್ನೆಲೆ ಜಾತ್ರಗೆ ಬ್ರೇಕ್ ಬಿದ್ದಿದೆ. ಅಂಗಡಿ ಹಾಕುವುದನ್ನೂ ನಿಷೇಧಿಸಲಾಗಿದೆ. ಸರಳವಾಗಿ ಪೂಜೆ ನಡೆಸುವ ಮೂಲಕ ಜಾತ್ರೆ ಆಚರಿಸಲು ನಿರ್ಧರಿಸಲಾಗಿದೆ. ದರ್ಶನಕ್ಕೆ ಬರುವ ಜನರಿಗೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ಅಂಗಡಿಗಳು ಇಲ್ಲದೆ ದೇವಸ್ಥಾನದ ಅಕ್ಕ ಪಕ್ಕ ಬಿಕೋ ಎನ್ನುತಿದ್ದು, ಭಕ್ತರ ಸಂಖ್ಯೆ ಸಹ ಇಳಿದಿದೆ. ಈ ದೇವಸ್ಥಾನವನ್ನು 1813 ರಲ್ಲಿ ಶ್ರೀನಿವಾಸರಾವ್ ಟಿಕಾರೆ ಎನ್ನುವವರು ಸ್ಥಾಪನೆ ಮಾಡಿದ ನಂತರ ಪ್ರತಿ ವರ್ಷ ಜಾತ್ರೆ ನಡೆಸುತ್ತ ಬರಲಾಗಿತ್ತು.

Click to comment

Leave a Reply

Your email address will not be published. Required fields are marked *

www.publictv.in