Karnataka
ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ: ಲಕ್ಷ್ಮಣ್ ಸವದಿ

– ಸಂಜೆಯಿಂದ ಬಸ್ ಸೇವೆ ಆರಂಭ
ಬೆಂಗಳೂರು: ಸಂಜೆಯಿಂದ ಬಸ್ ಸಂಚಾರ ಆರಂಭವಾಗುತ್ತದೆ. ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ಮುಗಿಸುತ್ತೇವೆ ಎನ್ನುವ ನಂಬಿಕೆ ನನಗೆ ಇದೆ ಎಂದು ಸಭೆಗೂ ಮುನ್ನ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರು ಮಾಡಬೇಕು ಅನ್ನೋ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ. ಒಂದು ನಿಗಮಕ್ಕೆ ಮಾಡಿದ್ರೆ ಬೇರೆ ನಿಗಮಗಳು ಬೇಡಿಕೆ ಇಡ್ತಾರೆ. ಹೀಗಾಗಿ ಆ ಬೇಡಿಕೆ ಈಡೇರಿಕೆ ಅಸಾಧ್ಯ. ಉಳಿದ ಎಲ್ಲ ಬೇಡಿಕೆಗಳನ್ನ ಆರ್ಥಿಕ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ. ಇಂದಿನ ಸಭೆ ಯಶಸ್ವಿಯಾಗುತ್ತೆ ಅನ್ನೋ ವಿಶ್ವಾಸ ಇದೆ. ಸರ್ಕಾರಕ್ಕೆ ಬರುವ ಆದಾಯವನ್ನು ನೌಕರಸ್ತರಿಗೆ ಕೊಡಬೇಕಾಗುತ್ತದೆ. ಸರ್ಕಾರಿ ನೌಕರನ್ನಾಗಿ ಮಾಡುವುದು ಕಷ್ಟವಾಗಿದೆ. ಸಾರ್ಕರ ಕೂಡ ಯಾವುದೇ ರೀತಿಯ ಒಪ್ಪಿಗೆ ನೀಡುವುದಿಲ್ಲ ಎಂದು ತಿಳಿಸಿದರು.
ಎಲ್ಲರಿಗೂ ಆಮಂತ್ರಣ ಕೊಟ್ಟಿದ್ದೇವೆ ಚರ್ಚೆ ಮಾಡಿ 12 ಗಂಟೆ ಒಳಗೆ ಚರ್ಚೆ ಮಾಡಿ ಮುಗಿಸುತ್ತೇವೆ ಎನ್ನುವ ಭರವಸೆ ಇದೆ. ಕೊರೊನಾ ಸಮಯದಲ್ಲಿ ಸಾಕಷ್ಟು ಹೊಡೆತಾ ಬಿದ್ದಿದೆ. ಕೆಲವೊಂದು ಕಷ್ಟ ಅಸಾಧ್ಯವಾಗಿರುವಂತದ್ದಾಗಿದೆ. ಹಣಕಾಸಿನ ಇತಿ ಮಿತಿಯೊಳಗೆ ನಾವು ಮಾಡಬೇಕಾಗಿದೆ ಎಂದು ತಿಳಿಸಿದರು.
ಇವತ್ತಿನ ಸಂದರ್ಭಕ್ಕೆ ನ್ಯಾಯ ಸಮ್ಮತವಾಗಿ ಅವರಿಗೆ ಏನೆಲ್ಲಾ ಕೊಡಲು ಸಾಧ್ಯ ಇದೆಯೋ ಅದೆಲ್ಲವನ್ನು ನಾವು ಕೊಡುತ್ತೇವೆ. ಅವರು ಶ್ರಮಿಕರು ಅವರ ಬೇಡಿಕೆಗಳಿಗೆ ನಾವು ಸ್ಪಂದನೆ ಮಾಡುತ್ತೇವೆ. ಯಾವುದೂ ಉದ್ದೇಶ ಇಲ್ಲದೇ ಯಾರು ಬಂದಿರುವುದಿಲ್ಲ ಕೋಡಿಹಳ್ಳಿ ಚಂದ್ರಶೆಖರ್ ಹಾಗೇ ಬಂದಿರುತ್ತಾರೆ ಎಂದು ನನಗೆ ಅನ್ನಿಸಿದೆ. ಇಂದಿನ ಸಭೆಗೆ ನಾವು ಅವರನ್ನೂ ಕರೆದಿಲ್ಲ. ನೌಕರರನ್ನು ಕರೆದಿದ್ದೇವೆ.
ಸಾರ್ವಜನಿಕರಿಗೆ ತೊಂದರೆಯಾಗಬಾರದು. ಸಾರಿಗೆ ಸಿಬ್ಬಂದಿ ನಮ್ಮ ಕುಟುಂಬದವರು ಇದ್ದ ಹಾಗೆ. ಅವರ ಮೇಲೆ ಎಸ್ಮಾ ಬ್ರಹ್ಮಾಸ್ತ್ರ ಉಪಯೋಗಿಸುಸುವುದು ನಮ್ಮ ಸರ್ಕಾರಕ್ಕೆ ಇಷ್ಟ ಇಲ್ಲ. ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಅವರು ಏನು ಬೇಡಿಕೆ ಇಡುತ್ತಾರೆ ಅದರ ಅನುಗುಣವಾಗಿ ನಮ್ಮ ಹಣಕಾಸಿನ ಇತಿಮಿತಿಯೊಳಗೆ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದು ನುಡಿದರು.
