Sunday, 20th January 2019

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಪದಗ್ರಹಣ-LIVE UPDATES

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ, 2ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಕುಮಾರಸ್ವಾಮಿ ಜೊತೆಗೆ ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ವಜೂಭಾಯ್ ರೂಢಾಬಾಯಿ ವಾಲಾ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಸಚಿವರು ವಿಶ್ವಾಸಮತ ಯಾಚನೆಯ ಬಳಿಕ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪದಗ್ರಹಣ ಸಮಾರಂಭಕ್ಕೆ ವಿಧಾನಸೌಧ ಸಂಪೂರ್ಣ ಸಜ್ಜಾಗಿದೆ. ಬೃಹತ್ ವೇದಿಕೆ, ಎಲ್‍ಇಡಿ ವ್ಯವಸ್ಥೆ, 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸದನದಲ್ಲಿ ಇದೇ 25ರಂದು ಕುಮಾರಸ್ವಾಮಿ ವಿಶ್ವಾಸಮತಯಾಚಿಸಲಿದ್ದು, ಮೇ 28ರಂದು ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ.

ಸಂಜೆ 5.00: ಕರುನಾಡಿನಲ್ಲಿ ಕುಮಾರ ಪರ್ವ ಆರಂಭ

ಸಂಜೆ 4.55: ತಾಯಿ ಚನ್ನಮ್ಮರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ನೂತನ ಸಿಎಂ ಕುಮಾರಸ್ವಾಮಿ

ಸಂಜೆ 4.51: ವೇದಿಕೆಯ ಮೇಲೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ‘ಕೈ’ಕುಲಕಿದ ನೂತನ ಸಿಎಂ ಕುಮಾರಸ್ವಾಮಿ

ಸಂಜೆ 4.50: ಪ್ರತಿಜ್ಞಾವಿಧಿ ಸಮಾರಂಭಕ್ಕೆ ಬಿಜೆಪಿ ನಾಯಕರು ಗೈರು

ಸಂಜೆ 4.46: ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಹೆಚ್ ಡಿಕೆ ಪ್ರಮಾಣ ವಚನ

ಸಂಜೆ 4.45: ಹೆಚ್ ಡಿಕೆ ಪ್ರಮಾಣ ವಚನದಲ್ಲಿ ತೃತೀಯ ರಂಗದ ಪವರ್ ಶೋ

ಸಂಜೆ 4.43: ನೂತನ ಸಿಎಂ , ಡಿಸಿಎಂಗೆ ಗಣ್ಯರಿಂದ ಅಭಿನಂದನೆ

ಸಂಜೆ 4.42: ಎಲ್ಲ ನಾಯಕರು ಕೈ ಎತ್ತುವ ಮೂಲಕ ಮಹಾಮೈತ್ರಿಯ ಶಕ್ತಿ ಪ್ರದರ್ಶನ

ಸಂಜೆ 4.40: ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್  ಗೆ ಶುಭಕೋರುತ್ತಿರುವ ರಾಷ್ಟ್ರ ಮತ್ತು ರಾಜ್ಯ ನಾಯಕರು

ಸಂಜೆ 4.37: ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಿ.ಪರಮೇಶ್ವರ್

ಸಂಜೆ 4.36: ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಜಿ.ಪರಮೇಶ್ವರ್

ಸಂಜೆ 4.35: ಕರ್ನಾಟಕದ 25ನೇ  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ

ಸಂಜೆ 4.32: ದೇವರ ಮತ್ತು ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ  ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ

ಸಂಜೆ 4.31: ರಾಜ್ಯಪಾಲರಿಂದ ಪ್ರತಿಜ್ಞಾ ವಿಧಿ ಬೋಧನೆ

ಸಂಜೆ 4.30: ಹೆಚ್ ಡಿಕೆ ಪ್ರಮಾಣ ವಚನ ಸಮಾರಂಭದಲ್ಲಿ ಮಹಾ ಮೈತ್ರಿಕೂಟದ ಶಕ್ತಿ ಪ್ರದರ್ಶನ

ಸಂಜೆ 4.29: ಮುಗಿಲು ಮುಟ್ಟಿದ ಕುಮಾರಸ್ವಾಮಿ ಅಭಿಮಾನಿಗಳ ಹರ್ಷ

ಸಂಜೆ 4.28: ಸೋನಿಯಾ ಗಾಂಧಿ ಮತ್ತು ಮಾಯಾವತಿ ಮಾತುಕತೆ

ಸಂಜೆ 4.27: ಸಂಭ್ರಮದಲ್ಲಿರುವ ಕಾರ್ಯಕರ್ತರತ್ತ ಕೈ ಬೀಸಿದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ

ಸಂಜೆ 4.26: ಕುಮಾರಪರ್ವಕ್ಕೆ ಕ್ಷಣಗಣನೆ

ಸಂಜೆ 4.25: ವೇದಿಕೆಯತ್ತ ಆಗಮಿಸಿದ ರಾಜ್ಯಪಾಲರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಜಿ.ಪರಮೇಶ್ವರ್-ಎಲ್ಲರನ್ನು ಸ್ವಾಗತಿಸಿಕೊಂಡ ನಿಯೋಜಿತ ಮುಖ್ಯಮಂತ್ರಿಗಳು

ಸಂಜೆ 4.20: ವೇದಿಕೆಯತ್ತ ಆಗಮಿಸಿದ RJD ನಾಯಕ ತೇಜಸ್ವಿ ಯಾದವ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಸಂಜೆ 4.18: ವೇದಿಕೆಯತ್ತ ಆಗಮಿಸಿ ಕಾರ್ಯಕರ್ತರತ್ತ ಕೈ ಬೀಸಿದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಸಂಜೆ 4.15: ವಿಧಾನ ಸೌಧಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೇಗೌಡರ ಆಗಮನ

ಸಂಜೆ 4.12: ಶರದ್ ಯಾದವ್ ಮತ್ತು ಅಖಿಲೇಶ್ ಯಾದವ್ ರಿಂದ ಹಸ್ತಲಾಘವ- ಕಾರ್ಯಕರ್ತರತ್ತ ಕೈ ಬೀಸಿದ ನಾಯಕರು-ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ನಿಯೋಜಿತ ಮುಖ್ಯಮಂತ್ರಿಗಳು

ಸಂಜೆ 4.10: ಪ್ಯಾಲೇಸ್ ಗ್ರೌಂಡ್ ಬಳಿ ಟ್ರಾಫಿಕ್ ಜಾಮ್ ಕಿರಿಕಿರಿ- ವೇದಿಕೆಯತ್ತ ಆಗಮಿಸಿದ ಸಮಾವಾದಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಅಖಿಲೇಶ್  ಯಾದವ್, BSP ಅಧಿನಾಯಕಿ ಮಾಯಾವತಿ

ಸಂಜೆ 4.05: ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿರುವ  ಗಣ್ಯರು ನಿಯೋಜಿತ ಆಸನಗಳಲ್ಲಿ ಆಸೀನ, ಟ್ರಾಫಿಕ್ ನಲ್ಲಿ ಸಿಲುಕಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ

ಸಂಜೆ 4.00: ನವಮಿ ಪೂರ್ವ ಫಲ್ಗುಣಿ ಅಮೃತ ಸಿದ್ಧಿ ಯೋಗದಲ್ಲಿಯೇ ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಕ್ಷಣಗಣನೆ

ಮಧ್ಯಾಹ್ನ 3.55:  ಕೆಲವೇ ಕ್ಷಣಗಳಲ್ಲಿ ವಿಧಾನಸೌಧಕ್ಕೆ ಕುಟುಂಬ ಸಮೇತರಾಗಿ ಆಗಮಿಸಲಿರುವ ಹೆಚ್.ಡಿ.ಕುಮಾರಸ್ವಾಮಿ

ಮಧ್ಯಾಹ್ನ 3.50: ಪದಗ್ರಹಣ ವೇದಿಕೆಯತ್ತ ಆಗಮಿಸುತ್ತಿರುವ ಅತಿಥಿಗಳು

ಮಧ್ಯಾಹ್ನ 3.50: ರಾಜ್ಯದ ಬಿಜೆಪಿ ಕೊಳೆಯನ್ನು ತೆಗೆಯುವದಕ್ಕೆ ಇಂದು ವರುಣ ದೇವ ಆಗಮಿಸಿದ್ದಾನೆ. ಮಳೆ ಬಂದಿರೋದು ಶುಭ ಸೂಚನೆ: ನಿಯೋಜಿತ  ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಮಧ್ಯಾಹ್ನ 3.50: ವಿಧಾನಸೌಧದತ್ತ  ಆಗಮಿಸುತ್ತಿರುವ ಕಾಂಗ್ರೆಸ್ ಶಾಸಕರು

ಮಧ್ಯಾಹ್ನ 3.45: ಪ್ರಮಾಣ ವಚನಕ್ಕೆ ಸಿದ್ಧಗೊಂಡ ವೇದಿಕೆ

ಮಧ್ಯಾಹ್ನ 3.40: ಕೆಲವೇ ಕ್ಷಣಗಳಲ್ಲಿ ಹೆಚ್.ಡಿ.ರೇವಣ್ಣ ಕುಟುಂಬ ಸಮೇತರಾಗಿ ಪದಗ್ರಹಣ ಕಾರ್ಯಕ್ರಮಕ್ಕೆ  ಆಗಮಿಸಲಿದ್ದಾರೆ

ಮಧ್ಯಾಹ್ನ 3.35: ವಿಧಾನಸೌಧದ ಮುಂಭಾಗದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ಮಧ್ಯಾಹ್ನ 3.30: ವಿಧಾನಸೌಧದ ಮುಂಭಾಗದಲ್ಲಿ ತುಂತುರು ಮಳೆ

ಮಧ್ಯಾಹ್ನ 3.28: ದೇವೇಗೌಡರ ನಿವಾಸದಲ್ಲಿ ಸಂಭ್ರಮದ ವಾತಾವರಣ

ಮಧ್ಯಾಹ್ನ3.25: ವಿಧಾನಸೌಧದತ್ತ  ಆಗಮಿಸುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು

ಮಧ್ಯಾಹ್ನ 3.25: ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಗಣ್ಯರಿಗೆ ಆಸನ ವ್ಯವಸ್ಥೆ

ಮಧ್ಯಾಹ್ನ 3.20: ಪತಿ ಕುಮಾರಸ್ವಾಮಿಗೆ ಪತ್ನಿ ಅನಿತಾ ಸಾಥ್

ಮಧ್ಯಾಹ್ನ 3.15: ಕೆಲವೇ ಕ್ಷಣಗಳಲ್ಲಿ ವಿಧಾನ ಸೌಧಕ್ಕೆ ಆಗಮಿಸಲಿರುವ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಮಧ್ಯಾಹ್ನ 3.12: ವಿಧಾನಸೌಧದತ್ತ ತೆರಳುತ್ತಿರುವ ಜೆಡಿಎಸ್ ಶಾಸಕರು

ಮಧ್ಯಾಹ್ನ 3.10: ತುಂತುರು  ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ಕೈ-ತೆನೆ ಕಾರ್ಯಕರ್ತರು

ಮಧ್ಯಾಹ್ನ 3.05: ಮಳೆ ಬಂದಿರೋದು ಕುಮಾರಸ್ವಾಮಿ ಅವರ ಪದಗ್ರಹಣಕ್ಕೆ ಸಿಕ್ಕ ಶುಭ ಸೂಚನೆ-ಕಾರ್ಯಕರ್ತರಿಂದ ಹರ್ಷ

ಮಧ್ಯಾಹ್ನ  3.00: ವಿಧಾನ ಸೌಧದ ಮುಂಭಾಗದಲ್ಲಿ ತಗ್ಗಿದ ಮಳೆ

ಮಧ್ಯಾಹ್ನ 2.55: ವಿಧಾನಸೌಧದ ಮುಂಭಾಗದಲ್ಲಿ ಅರ್ಧ ಅಡಿ ಹರಿಯುತ್ತಿರುವ ಮಳೆಯ ನೀರು

ಮಧ್ಯಾಹ್ನ 2.55:  ಸಂಜೆ 4.30ರೊಳಗೆ ಮಳೆ ನಿಲ್ಲದೇ ಹೋದ್ರೆ ಬಾಂಕ್ವೇಟ್ ಹಾಲ್ ನಲ್ಲಿ ಸಮಾರಂಭಕ್ಕೆ ಸಿದ್ಧತೆ

ಮಧ್ಯಾಹ್ನ 2.50: ಕುಮಾರಸ್ವಾಮಿ ಪದಗ್ರಹಣಕ್ಕೆ ಕ್ಷಣ ಗಣನೆ

ಮಧ್ಯಾಹ್ನ 2.48: ಕಾರ್ಯಕ್ರಮಕ್ಕೆ ಹಾಕಲಾಗಿದ್ದ, ಫ್ಲೆಕ್ಷ್ ಗಳನ್ನೇ ಛತ್ರಿ ರೀತಿಯಲ್ಲಿ ಬಳಸಿಕೊಂಡ ಕಾರ್ಯಕರ್ತರು

ಮಧ್ಯಾಹ್ನ 2.45: ಮಳೆಯ ನಡುವೆಯೂ ಕೈ-ತೆನೆ ಕಾರ್ಯಕರ್ತರ ಕುಂದದ ಉತ್ಸಾಹ

ಮಧ್ಯಾಹ್ನ 2.40: ಕುಮಾರಸ್ವಾಮಿ ಪದಗ್ರಹಣಕ್ಕೆ ವರುಣ ಅಡ್ಡಿ

 

Leave a Reply

Your email address will not be published. Required fields are marked *