ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಅವರೇ ಕ್ಯಾಸೆಟ್ ಅನ್ನ ರಿಲೀಸ್ ಮಾಡಿದ್ದಾರೆ. ಇವರಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ, ಅವರಿಗೆ ನಾಚಿಕೆ ಆಗಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ (Siddaramaiah) ಭೇಟಿ ಕುರಿತು ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇಡಿ ರಾಜ್ಯದಲ್ಲಿ ದೀರ್ಘಕಾಲದ ಸಿಎಂ ಆಗಿದ್ದವರು. ಹೆಚ್ಚು ಕಾಲ ವಿಪಕ್ಷ ನಾಯಕರಾಗಿ ಜನರ ಮನ ಗೆದ್ದವರು. ಸ್ಟಿಂಗ್ ಬಗ್ಗೆ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಯಾರು ಸ್ಟಿಂಗ್ ಮಾಡಿದ್ರು, ಕ್ಯಾಸೆಟ್ ಅನ್ನ ಯಾರು ಯಾರಿಗೆ ಕೊಟ್ರು ಅನ್ನೋದೆಲ್ಲಾ ಹೊರಗಡೆ ಬರುತ್ತೆ. ಸಿದ್ದರಾಮಯ್ಯರನ್ನ ಭೇಟಿ ಮಾಡುತ್ತೇನೆ ಅಂತಾ ಹೇಳುತ್ತಾರೆ, ಇವರಿಗೆ ನಾಚಿಕೆ ಆಗಬೇಕು. ಇವರದ್ದೇನು ನಾಯಕರನ್ನ ಬೆಳೆಸಿದ ಫ್ಯಾಕ್ಟ್ರಿನಾ? ಎಲ್ಲರನ್ನೂ ನಾವೇ ಬೆಳೆಸಿರೋದು ಅಂತ ಹೇಳುತ್ತಾರೆ. ಬೊಮ್ಮಾಯಿ, ಪಟೇಲ್ ಯಾರೂ ಪಕ್ಷ ಕಟ್ಟಿರಲಿಲ್ಲವಾ? ಏನು ಕುಮಾರಸ್ವಾಮಿ ಬಂದು ಪಕ್ಷವನ್ನ ಕಟ್ಟಿರೋ ಹಾಗೆ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಸದ ಟೆಂಡರ್‌ನಲ್ಲಿ ಗೋಲ್ಮಾಲ್, ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ 133 ಕೋಟಿ ಟೆಂಡರ್: ಆರ್.ಅಶೋಕ್ ಬಾಂಬ್
ಇಡೀ ರಾಜ್ಯದ ಏಳು ಕೋಟಿ ಜನರ ನೈತಿಕ ಬೆಂಬಲ ಸಿದ್ದರಾಮಯ್ಯನವರಿಗೆ ಇದೆ. ಅಸೆಂಬ್ಲಿಯಲ್ಲಿ ಏನು ಮಾತನಾಡಿದ್ದಾರೆ ಅಂತಾ ಗೊತ್ತಿದೆ. ಎಲ್ಲಿ ರಿಲೀಸ್ ಮಾಡಿಸಿದೆ, ಎಲ್ಲಿ ಚರ್ಚೆ ಮಾಡಿಸಿದೆ ಇದೆಲ್ಲಾ ಬೇಕಾ? ಈಗ ಗಲೀಜ್ ಮಾಡಿಬಿಟ್ಟಿದ್ದೀರಿ? ನೀವು ರೈತರ ಪರ ಇರುವ ಲೀಡರ್ ಅಲ್ಲವಾ? ಉದ್ಯಮಿಗಳಿಗೆ ಎನ್‌ಡಿಎ ಸರ್ಕಾರ ಸಾಲಮನ್ನಾ ಮಾಡಿದೆ ಅಲ್ಲವಾ? ಮೊದಲು ಮೋದಿ ಬಳಿ ಹೋಗಿ ರೈತರ ಸಾಲಮನ್ನಾ ಮಾಡಿಸಿ, ಯಾರನ್ನ ಕರೆದುಕೊಂಡು ಹೋಗುತ್ತೀರಿ ಗೊತ್ತಿಲ್ಲಾ. ಇದನ್ನೆಲ್ಲಾ ಬಿಡಿ ಮಿಸ್ಟರ್ ಕುಮಾರಸ್ವಾಮಿ, ಇದರಿಂದ ಸಿದ್ದರಾಮಯ್ಯನವರಿಗೆ ಡ್ಯಾಮೇಜ್ ಆಗಲ್ಲ. ಒಂದು ಕಡೆ ಕ್ಯಾಸೆಟ್ ಬಿಡುಗಡೆ ಮಾಡಿಸಿ ಇನ್ನೊಂದು ಕಡೆ ನೈತಿಕತೆಯ ಮಾತನಾಡುತ್ತೀರಿ ಎಂದು ಹರಿಹಾಯ್ದರು. ಇದನ್ನೂ ಓದಿ: ದರ್ಶನ್ ಜೈಲಿಂದ ಬಿಡುಗಡೆ ಆಗೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? – ಧನ್ವೀರ್ ಸ್ನೇಹಿತನ ಜೊತೆ ಅನಾಮಿಕ ಬಾಯ್ಬಿಟ್ಟ ಸತ್ಯ ಏನು?
