Bengaluru City
ತಿರುಪತಿಗೆ ವಿಶೇಷ ಪ್ಯಾಕೇಜ್ ಟೂರ್ ಘೋಷಿಸಿದ KSRTC

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರು- ತಿರುಪತಿ ಹೋಗುವ ಪ್ರಯಾಣಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಬೆಂಗಳೂರಿನಿಂದ ತಿರುಪತಿಗೆ ಹೋಗುವ ಪ್ರಯಾಣಿಕರಿಗಾಗಿ ಬೆಂಗಳೂರಿನ ಹಲವು ನಗರದಿಂದ ಐರಾವತ ಕ್ಲಬ್ ಕ್ಲಾಸ್ ಬಸ್ ಸಂಚಾರ ಮಾಡಲಿದೆ. ಬೆಂಗಳೂರಿನ ಶಾಂತಿನಗರದಿಂದ ಹೊರಡುವ ತಿರುಪತಿ ಬಸ್ 8 ನಿಲ್ದಾಣಗಳಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ಹೊರಡಲಿದೆ. ಪ್ರತಿ ದಿನ ರಾತ್ರಿ 8.45ಕ್ಕೆ ಬಸ್ ತಿರುಪತಿಗೆ ಸಂಚರಿಸಲಿದೆ.
ನಗರದ 8 ನಿಲ್ದಾಣಗಳಾದ ಜಯನಗರ ನಾಲ್ಕನೇ ಬ್ಲಾಕ್, ನಾಗಸಂದ್ರ, ಎನ್.ಆರ್ ಕಾಲೋನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು ಟಿಟಿಎಂಸಿ, ಮಾರತಹಳ್ಳಿ, ಐಟಿಐ ಗೇಟ್ ಹಾಗೂ ಕೆ ಆರ್ ಪುರಂ ನಿಲ್ದಾಣಗಳಿಂದ ಪ್ರಯಾಣಿಕರು ಬಸ್ ಹತ್ತಬಹುದೆಂದು ಕೆಎಸ್ಆರ್ಟಿಸಿ ತಿಳಿಸಿದೆ.
ವಿಶೇಷ ಪ್ಯಾಕೇಜ್ನಲ್ಲಿ ಭಾನುವಾರದಿಂದ ಗುರುವಾರದವರೆಗೆ ಹೊರಡುವ ಪ್ರಯಾಣಿಕರಿಗೆ 2,200 ರೂಪಾಯಿ +ಜಿಎಸ್ಟಿ ಟಿಕೆಟ್ ಅದರಲ್ಲಿ 6ರಿಂದ 12 ವರ್ಷದೊಳಗಿನ ಮಕ್ಕಳಿಗೆ 1800 ರೂಪಾಯಿ +ಜಿಎಸ್ಟಿ ಶುಕ್ರವಾರದಿಂದ ಶನಿವಾರ ಹೊರಡುವ ಪ್ರಯಾಣಿಕರಿಗೆ 2600 ರೂಪಾಯಿ +ಜಿಎಸ್ಟಿ ಟಿಕೆಟ್, 6ರಿಂದ 12 ವರ್ಷದೊಳಗಿನ ಮಕ್ಕಳಿಗೆ 2000 ರೂಪಾಯಿ +ಜಿಎಸ್ಟಿ ಟಿಕೆಟ್ ದರ ನಿಗದಿ ಪಡಿಸಿದೆ.
