Bengaluru City
ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ KSRTC

ಬೆಂಗಳೂರು: ರಾಜ್ಯದ ಜನತೆಗೆ ಕೆಎಸ್ಆರ್ ಟಿಸಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯದ ದಿನಗಳಂದು ಶೇ.10ರಷ್ಟು ಹೆಚ್ಚುವರಿ ಪ್ರಯಾಣದರ ಕೊಟ್ಟು ಈ ಹಿಂದೆ ಪ್ರಯಾಣಿಸಬೇಕಿತ್ತು. ಆದರೆ ಇದೀಗ ಈ ನಿಯಮವನ್ನು ಕಡಿತಗೊಳಿಸಿದೆ.
ರಾಜ್ಯ ಸಾರಿಗೆ ನಿಗಮದ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಾದ ಶುಕ್ರವಾರ ಹಾಗೂ ಭಾನುವಾರದಂದು ಶೇ. 10ರಷ್ಟು ಹೆಚ್ಚುವರಿ ಪ್ರಯಾಣ ದರ ಕೊಟ್ಟು ಪ್ರಯಾಣಿಸಬೇಕಿತ್ತು. ಆದರೆ ಇದೀಗ ವಾರಾಂತ್ಯದ ಶೇ. 10 ಹಚ್ಚುವರಿ ದರವನ್ನು 2021ರ ಜನವರಿ 15 ರಿಂದ ಮಾರ್ಚ್ 31ರ ಅವಧಿಗೆ ಹಿಂಪಡೆಯಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆ ಹೊರಡಿಸಿದೆ.
ಇನ್ನೂ ವಾರದ ಎಲ್ಲಾ ದಿನಗಳಂದು ಏಕರೂಪದ ಪ್ರಯಾಣದರ ನಿಗದಿಪಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
