ಕೃತಿ ಕರಬಂದ, ಸಾಮ್ರಾಟ್ ಲವ್- ನನಗೆ ಲಾಭವಾಯ್ತು ಎಂದ ನಿರ್ದೇಶಕ

ಮುಂಬೈ: ಚಂದನವನದ ಗೂಗ್ಲಿ ಬೆಡಗಿ ಕೃತಿ ಕರಬಂದ ಪ್ರೇಮ ವ್ಯೂಹದಲ್ಲಿ ಸಿಲುಕಿರೋದು ನನಗೆ ಲಾಭವಾಗಿದೆ ಎಂದು ನಿರ್ದೇಶಕ ಅನೀಸ್ ಬಜ್ಮೀ ಹೇಳಿದ್ದಾರೆ.

ಬಾಲಿವುಡ್ ನಟ ಪುಲ್ಕಿಟ್ ಸಾಮ್ರಾಟ್ ಪ್ರೇಮ ಪಾಶದಲ್ಲಿ ಕೃತಿ ಸಿಲುಕಿದ್ದು, ಇಬ್ಬರು ಕಳೆದ ಆರೇಳು ತಿಂಗಳಿನಿಂದ ಡೇಟ್‍ನಲ್ಲಿದ್ದಾರೆ. ಇಬ್ಬರು ಜೊತೆಯಾಗಿ ನಟಿಸಿರುವ ಪಾಗಲ್ ಪಂತಿ ಸಿನಿಮಾ ಸಹ ಬಿಡುಗಡೆಗೆ ಸಿದ್ಧಗೊಂಡಿದ್ದು, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇಬ್ಬರ ಪ್ರೇಮ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಗಲ್‍ಪಂತಿ ಸಿನಿಮಾ ನಿರ್ದೇಶಕ ಅನೀಸ್ ಬಜ್ಮೀ, ನನ್ನ ಚಿತ್ರದಲ್ಲಿ ಇಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. ತೆರೆಯ ಹಿಂದೆಯೂ ಸಹ ಇಬ್ಬರು ಪ್ರೇಮಿಸುತ್ತಿರುವ ಕಾರಣ ನನಗೆ ಹೆಚ್ಚು ಲಾಭವಾಯ್ತು ಎಂದಿದ್ದಾರೆ.

ಕೃತಿ ಮತ್ತು ಸಾಮ್ರಾಟ್ ಜೋಡಿಯಾಗಿ ನಟಿಸಿದ್ದು, ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯಗಳಿದ್ದವು. ಇಬ್ಬರು ಪ್ರೇಮದಲ್ಲಿ ಇರೋದರಿಂದ ರೊಮ್ಯಾಂಟಿಕ್ ಮತ್ತು ಕಿಸ್ಸಿಂಗ್ ಸೀನ್ ಗಳು ನ್ಯಾಚೂರಲ್ ಆಗಿಯೇ ಮೂಡಿಬಂದಿವೆ. ತೆರೆಯ ಮೇಲೆಯೂ ಸಹ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ ಎಂದು ಅನೀಸ್ ಬಜ್ಮೀ ಹೇಳುತ್ತಾರೆ.

ಕಳೆದ ಎರಡು ತಿಂಗಳಿನಿಂದ ಕೃತಿ ಮತ್ತು ಸಾಮ್ರಾಟ್ ನಡುವಿನ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕೃತಿ, ನೀವು ಕೇಳಿರುವ ಸುದ್ದಿಗಳು. ಕಳೆದ ಆರು ತಿಂಗಳಿನಿಂದ ಸಾಮ್ರಾಟ್ ಜೊತೆ ಡೇಟ್ ನಲ್ಲಿದ್ದೇನೆ ಎಂದಿದ್ದಾರೆ.

ಪಾಗಲ್ ಪಂತಿ ಸಿನಿಮಾದಲ್ಲಿ ಎರಡನೇ ಬಾರಿ ಜೊತೆಯಾಗಿರುವ ಕೃತಿ ಮತ್ತು ಸಾಮ್ರಾಟ್ ಒಬ್ಬರಿಗೊಬ್ಬರು ಮೆಸೇಜ್, ಹೂಗುಚ್ಛ ಕಳುಹಿಸುವ ಮೂಲಕ ತಮ್ಮ ಪ್ರೀತಿಯ ಸುಳಿವು ನೀಡಿದ್ದರು. ಸಾಮ್ರಾಟ್ ಪ್ರತಿದಿನ ಶೂಟಿಂಗ್ ಮುನ್ನ ಕೃತಿ ಮೇಕಪ್ ಕೋಣೆಗೆ ಚಾಕೋಲೇಟ್ ಮತ್ತು ಹೂಗುಚ್ಛ ಕಳುಹಿಸುತ್ತಿದ್ದರು. 2018ರಲ್ಲಿ ಬಿಡುಗಡೆಯಾಗಿದ್ದ ‘ವೀರೇ ಕೀ ವೆಡ್ಡಿಂಗ್’ ಸಿನಿಮಾದಲ್ಲಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿತ್ತು.

29 ವರ್ಷದ ಕೃತಿ ಕರಬಂದ ಇದೂವರೆಗೂ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿರು ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ಕೃತಿ ತಮ್ಮ ಮುಗುಳ್ನಗೆ ಮೂಲಕವೇ ಕನ್ನಡಿಗರ ಹೃದಯ ಕದ್ದಿದ್ದರು. ಪ್ರೇಮ ಅಡ್ಡ, ಗಲಾಟೆ, ಸೂಪರ್ ರಂಗ, ಬೆಳ್ಳಿ, ಗೂಗ್ಲಿ, ಮಾಸ್ತಿಗುಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *