Cinema

ಮದುವೆಯ ಸುಳಿವು ಕೊಟ್ಟ ಗೂಗ್ಲಿ ನಟಿ ಕೃತಿ ಕರಬಂಧ

Published

on

Share this

ಮುಂಬೈ: ರಾಕಿಂಗ್ ಸ್ಟಾರ್ ಯಶ್ ನಟನೆಯ ಗೂಗ್ಲಿ ಸಿನಿಮಾ ನಟಿ ಕೃತಿ ಕರಬಂಧ ನಟ ಪುಲ್ಕಿಟ್ ಸಾಮ್ರಾಟ್ ಜೊತೆ ಡೇಟ್ ಮಾಡುತ್ತಿದ್ದಾರೆ. ಅವರು ಯಾವಾಗ ಮದುವೆ ಆಗಲಿದ್ದಾರೆ ಈ ಕುರಿತು ಕೃತಿ ಕರಬಂಧ ಮೌನ ಮುರಿದಿದ್ದಾರೆ.

ಸ್ನೇಹಿತ/ ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಮದುವೆಯ ಯೋಚನೆಯ ಕುರಿತು ಮಾಧ್ಯಮವೊಂದರಲ್ಲಿ ಅವರು ಮಾತನಾಡಿದ್ದು, ತಾನು ಸಾಮ್ರಾಟ್ ಜೊತೆ ಒಡನಾಟದಲ್ಲಿರುವುದು ಮುಕ್ತವಾಗಿ ಹೇಳಿಕೊಂಡಿದ್ದರೂ ಸಹ ಉಳಿದ ವಿಚಾರಗಳನ್ನು ಗೌಪ್ಯವಾಗಿಯೇ ಇಡಲು ಬಯಸುವುದಾಗಿ ತಿಳಿಸಿದ್ದಾರೆ.

ಪುಲ್ಕಿತ್ ಸಾಮ್ರಾಟ್ ಜೊತೆಗಿನ ಮದುವೆಯ ವಿಚಾರವನ್ನು ಕೇವಲ ಪೋಷಕರೊಂದಿಗೆ ಮಾತ್ರ ಮಾತನಾಡುವುದಾಗಿ ತಿಳಿಸಿದ ಅವರು, ತಾನು ಖಾಸಗಿ ವಿಚಾರಗಳನ್ನು ಎಂದಿಗೂ ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ತಾನು ಪುಲ್ಕಿತ್ ಜೊತೆಗೆ ಡೇಟಿಂಗ್ ಆರಂಭಿಸಿದಾಗ ಅದನ್ನು ಮುಕ್ತವಾಗಿ ಒಪ್ಪಿಕೊಂಡೆ ಮತ್ತು ಎಲ್ಲರೆದುರು ಹೇಳಿಕೊಂಡೆ. ಅದಕ್ಕೆ ನನಗೇನೂ ಹಿಂಜರಿಕೆ ಇಲ್ಲ. ಆದರೆ ಅದರ ನಂತರದ್ದು ತೀರಾ ವೈಯಕ್ತಿಕ ವಿಷಯ. ಅದು ಬಹಳ ಪವಿತ್ರವಾದದ್ದು ಎಂಬ ಭಾವನೆ ನನ್ನದು. ಅದನ್ನು ನನ್ನ ತೀರಾ ಆಪ್ತ ವಲಯದೊಂದಿಗೆ ಮಾತ್ರ ಹಂಚಿಕೊಳ್ಳಬಲ್ಲನೇ ಹೊರತು ಮತ್ಯಾರಿಗೂ ತಿಳಿಸುವ ಅವಶ್ಯಕತೆ ನನಗೆ ಕಾಣುವುದಿಲ್ಲ ಎಂದು ಕೃತಿ ಹೇಳಿದ್ದಾರೆ.

 

View this post on Instagram

 

A post shared by Pulkit Samrat (@pulkitsamrat)

ನೀವು ಅದ್ದೂರಿ ಮದುವೆಯನ್ನು ಇಷ್ಟಪಡುತ್ತೀರಾ ಎಂಬ ಪ್ರಶ್ನೆಗೆ ಕೃತಿ ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ. ತಾನು ಆ ಕ್ಷಣದ್ದನ್ನು ಮಾತ್ರ ಯೋಚಿಸಬಲ್ಲೆ. ಹೀಗಾಗಿ ಆ ಕುರಿತು ತಾನಿನ್ನೂ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ. ಹಾಗೆಯೇ ಮುಂದಿನ ಭವಿಷ್ಯದ ಬಗ್ಗೆ ಯಾರಿಗೂ ತಿಳಿದಿಲ್ಲ. ಹಾಗಾಗಿ ಈ ಪ್ಲಾನ್ ಎಲ್ಲಾ ಮಾಡುವುದು ಏಕೆ? ಏನಾಗಬೇಕೋ ಅದು ಆಗುತ್ತದೆ. ಆದರೆ ಏನಾಗುತ್ತದೆ ಎಂದು ನನಗಿನ್ನೂ ತಿಳಿದಿಲ್ಲ. ನಿಮ್ಮಂತೆ ನನಗೂ ಆ ಸಮಯದಲ್ಲಿ ಆಶ್ಚರ್ಯವಾಗಬಹುದು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಒಟ್ಟಾರೆಯಾಗಿ ಕೃತಿ ಕರಬಂಧ ಮದುವೆಯ ಕುರಿತಾಗಿ ಕೆಲವು ವಿಚಾರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಮದುವೆಯ ಸುಳಿವು ಕೊಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement