ಉಡುಪಿ: ವಿಜಯ ದಶಮಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಗ್ರಾಮದಲ್ಲಿ ಪಥ ಸಂಚಲನ ನಡೆಯಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಿಳಿ ಅಂಗಿ, ಕಂದು ಬಣ್ಣದ ಪ್ಯಾಂಟ್, ಕಪ್ಪು ಟೋಪಿ, ಬೆಲ್ಟ್, ಶೂ ಧರಿಸಿ ಕೈಯಲ್ಲಿ ದಂಡ ಹಿಡಿದು ಪಥಸಂಚಲನದಲ್ಲಿ ಭಾಗವಹಿಸಿದ್ರು.
Advertisement
Advertisement
ಘೋಷಣೆ ಸಹಿತ ಕೋಟ ಮೂರುಕೈ ಪ್ರದೇಶದಿಂದ ಸಾಗಿಬಂದ ಸ್ವಯಂಸೇವಕರ ಪಥ ಸಂಚಲನವು ಕೋಟ ಬಸ್ ನಿಲ್ದಾಣದವರೆಗೆ ಸಾಗಿತು. ಬಳಿಕ ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ಎಂಎಲ್ಸಿ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ಈ ಬಾರಿ ಡಿಫರೆಂಟ್ ಲುಕ್ನಲ್ಲಿ ಕಂಡುಬಂದ್ರು. ರಾಜಕಾರಣಿಯಾಗಿ ಎಂಎಲ್ ಸಿಯಾದ್ರೂ ಆರ್ ಎಸ್ ಎಸ್ ಚಟುವಟಿಕೆಯಲ್ಲಿ ಕೋಟ ತೊಡಗಿಸಿಕೊಂಡಿದ್ದಾರೆ. ಸೀಡ್ ಬಾಲ್, ಶಾಖೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದ್ಯಾರ್ಥಿ. ಬಹಳ ಶಿಸ್ತಿನಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ವಾರ್ಷಿಕ ಪಥ ಸಂಚಲನ ದಲ್ಲಿ ಪಾಲ್ಗೊಂಡಿದ್ದೇನೆ. ಈ ಬಗ್ಗೆ ನನಗೆ ಗೌರವ ಇದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv