Crime
ಮನೆ ಕುಸಿದು ವೃದ್ಧೆ ಸಾವು

ಕೊಪ್ಪಳ: ಮನೆ ಕುಸಿದು ವೃದ್ಧೆಯೊಬ್ಬರು ಬಲಿಯಾದ ಘಟನೆ ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿ ಅಜ್ಜಿಯನ್ನು ಈರಮ್ಮ ಮೆಳ್ಳಿಕೇರಿ (75) ಎಂದು ಗುರುತಿಸಲಾಗಿದೆ. ಮಣ್ಣಿನ ಮನೆ ಛತ್ತು ಕುಸಿದು ಅದರ ಅವಶೇಷಗಳಡಿ ಅಜ್ಜಿ ಸಿಲುಕಿ ಮೃತಪಟ್ಟಿದ್ದಾರೆ.
ಮಣ್ಣಿನಡಿ ಸಿಲುಕಿದ್ದ ವೃದ್ಧೆಯ ಶವವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಮನೆಯಲ್ಲಿದ್ದ ಇತರ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
