Connect with us

Districts

ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ, ಕುಂಕುಮ ಹಾಗೆ ಇಟ್ಟಿದ್ದೇವೆ: ತಂಗಡಗಿ

Published

on

– ಯತ್ನಾಳ್ ನಿಜವಾಗಿಯೂ ತಾಕತ್ತು ಇರುವ ಮನುಷ್ಯ

ಕೊಪ್ಪಳ: ಸಂಸದರಿಗೆ ನೀಡಬೇಕಿದ್ದ ಸೀರೆ, ಬಳೆ ಮತ್ತು ಕುಂಕುಮ ಹಾಗೆ ಇಟ್ಟಿದ್ದೇವೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಸಂಸದರು ಮತ್ತು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನೆಡಸಿದರು.

ಕೊಪ್ಪಳದ ಕನಕಗಿರಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಇಂದು ಕಾಂಗ್ರೆಸ್ ಸದ್ಭಾವನ ಯಾತ್ರೆ ಆಯೋಜಿಸಲಾಗಿತ್ತು. ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದಿಂದ 14 ಕಿಮೀ ಪಾದಯಾತ್ರೆ ಮೂಲಕ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಕನಕಗಿರಿವರೆಗೆ ಪಾದಯಾತ್ರೆ ಮಾಡಿದರು.

ಈ ವೇಳೆ ಕೆಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ತಂಗಡಗಿ ಬಿಜೆಪಿ ಪಕ್ಷದ ಸಂಸದರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ನೆರೆ ಸಂತ್ರಸ್ತರಿಗೆ ಕೊಡಬೇಕಾದ ಪರಿಹಾರ ಇನ್ನೂ ಪೂರ್ತಿಯಾಗಿ ಕೇಂದ್ರ ಕೊಟ್ಟಿಲ್ಲ. ತಂಗಡಗಿ ಸೀರೆ, ಕುಂಕಮ ಕಳಿಸ್ತಾರೆ ಅಂತಾನೆ ಕೇಂದ್ರ 1200 ಕೋಟಿ ಅನುದಾನ ನೀಡಲಾಗಿದೆ. ಇನ್ನೂಳಿದ ಪರಿಹಾರಕ್ಕಾಗಿ 15 ದಿನ ಗಡುವು ನೀಡುತ್ತೇವೆ. ಕೂಡಲೇ ಸರ್ಕಾರ ಎರಡನೇ ಹಂತದ ಅನುದಾನ ನೀಡಬೇಕು. ಇಲ್ಲಾಂದರೆ ಸೀರೆ, ಕುಂಕಮ ಫಿಕ್ಸ್ ಎಂದು ವಾಗ್ದಾಳಿ ನೆಡಸಿದರು.

ಉಪಚುನಾವಣೆ ನಂತರ ಬಿಜೆಪಿ ಜೊತೆಗೆ ಬಿಎಸ್‍ವೈ ಸರ್ಕಾರ ಪತನವಾಗಲಿದೆ. ಕನಕಗಿರಿಯಲ್ಲಿ ಬಿಜೆಪಿ ಶಾಸಕ ಬಸವರಾಜ್ ದಡೇಸೂಗುರು ಗೆಲ್ಲುವಾಗ ಬಿಎಸ್‍ವೈ ಹೆಸರು ಹೇಳುತ್ತಿದ್ದರು. ಇವಾಗ ಯಡಿಯೂರಪ್ಪ ಗೆ ಬಿಜೆಪಿಯಲ್ಲಿ ಸಂಕಷ್ಟ ಇದೆ. ಬಸವರಾಜ್ ದಡೇಸೂಗುರು ಈ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಿ ಪಕ್ಷದಿಂದ ತೆಗೆದು ಹಾಕುತ್ತಾರೆ ಎಂದು ಬಿಜೆಪಿ ಶಾಸಕರಲ್ಲಿ ಭಯ ಕಾಡುತ್ತಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಾಕತ್ತಿನ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ನಿಜವಾದ ಕಾಳಜಿ ಬಿಜೆಪಿಯಲ್ಲಿ ಯತ್ನಾಳ್‍ಗಿದೆ. ಯತ್ನಾಳ್ ನಿಜವಾಗಿ ತಾಕತ್ತು ಇರುವ ಮನುಷ್ಯ. ನೆರೆ ಪರಿಹಾರ ಕೇಳಿದರೆ ಕೇಂದ್ರ ನೋಟಿಸ್ ಕೊಡುವ ಕೆಲಸ ಮಾಡುತ್ತಿದೆ. ಇಂತಹ ಸಾವಿರ ನೋಟಿಸ್ ಕೊಟ್ಟರು ಉ.ಕರ್ನಾಟಕ ಮಂದಿ ಜಗ್ಗಲ್ಲಾ ಎಂದು ಹೇಳಿ ಶಾಸಕ ಯತ್ನಾಳ್ ಪರ ತಂಗಡಗಿ ಬ್ಯಾಟಿಂಗ್ ಮಾಡಿದರು.