Advertisements

ಪಡಿತರ ಅಕ್ಕಿ ಅಕ್ರಮವಾಗಿ ಗುಜರಾತ್‍ಗೆ ಸಾಗಣೆ- 8.10 ಲಕ್ಷದ ಅಕ್ಕಿ ವಶಕ್ಕೆ

ಕೊಪ್ಪಳ: ಜಿಲ್ಲೆಯ ಗಂಗಾವತಿಯಿಂದ ಗುಜರಾತ್‍ಗೆ ಅನಧಿಕೃತವಾಗಿ ಸಾಗಣೆ ಆಗುತ್ತಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisements

ಕುಷ್ಟಗಿ ತಾಲೂಕಿನ ವಣಗೇರಿ ಬಳಿಯ ಟೋಲ್ ಪ್ಲಾಜಾ ಬಳಿ, ಆಹಾರ ಇಲಾಖೆ ನಿರೀಕ್ಷಕ ನಿತೀನ್ ಅಗ್ನಿ ನೇತ್ರತ್ವದಲ್ಲಿ ದಾಳಿ ಮಾಡಿ, ಅಕ್ಕಿ ಸಮೇತ ಲಾರಿ ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕ ಮದನಲಾಲ್ ಹಾಗೂ ಗಂಗಾವತಿಯ ಅಭಿಜಿತ್ ಟ್ರೇಡರ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು

Advertisements

ಲಾರಿಯಲ್ಲಿ ಒಟ್ಟು 340 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಇದ್ದು, ಸುಮಾರು 8.10 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಎಂದು ಅಂದಾಜಿಸಲಾಗಿದೆ. ಈ ಕುರಿತು ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

Advertisements
Exit mobile version