Connect with us

Cinema

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಆಲೂಗೆಡ್ಡೆ’ಯನ್ನು ತಬ್ಬಿಕೊಂಡ ಶೃತಿಹಾಸನ್

Published

on

ಮುಂಬೈ: ಕಾಲಿವುಡ್ ನಟಿ ಶೃತಿ ಹಾಸನ್‍ಗೆ 35ನೇ ವರ್ಷದ ಜನ್ಮದಿನದ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿಯ ಬರ್ತಡೇಯನ್ನು ಶೃತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಸೆಲೆಬ್ರೆಟ್ ಮಾಡಿದ್ದು, ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಪೋಸ್ಟ್‍ನಲ್ಲಿ ಬಾಯ್ ಫ್ರೆಂಡ್ ನಿಕ್ ನೇಮ್‍ನನ್ನು ಶೃತಿ ರಿವೀಲ್ ಮಾಡಿದ್ದಾರೆ.

ಹೌದು ಇನ್ ಸ್ಟಾಗ್ರಾಮ್‍ನಲ್ಲಿ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೃತಿ, ತಮ್ಮ ಬರ್ತಡೇಯನ್ನು ವಿಶೇಷವಾಗಿ ಸೆಲೆಬ್ರೆಟ್ ಮಾಡಿದ ಸಂತನುಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಸಂತನು ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇಬ್ಬರು ಆತ್ಮೀಯವಾಗಿ ತಬ್ಬಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಶೃತಿಗೆ ಬರ್ತಡೇ ವಿಶ್ ಮಾಡಿದ್ದಾರೆ.

ವಿಶೇಷ ಏನಪ್ಪಾ ಅಂದ್ರೆ, ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೂಡ ಸಂತನುಗೆ ಫೋಸ್ಟ್ ಮೂಲಕ ಧನ್ಯವಾದ ತಿಳಿಸಿರುವ ಶೃತಿ ಆಲೂಗಡ್ಡೆ ಸ್ಟಿಕ್ಕರ್ ಹಾಕಿಕೊಂಡಿದ್ದಾರೆ. ಈ ಮೂಲಕ ಸಂತನುರನ್ನು ಶೃತಿ ಪ್ರೀತಿಯಿಂದ ಆಲೂಗಡ್ಡೆ ಎಂಬ ನಿಕ್ ನೇಮ್‍ನಿಂದ ಕರೆಯುತ್ತಾರೆ ಎಂಬ ವಿಚಾರ ರಿವೀಲ್ ಮಾಡಿದ್ದಾರೆ.

ಶ್ರುತಿ ಹಾಸನ್ ಮತ್ತು ಸಂತನು ಹಲವಾರು ಬಾರಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಹುಟ್ಟುಹಬ್ಬದ ದಿನ ಇಬ್ಬರು ಸಂಜೆ ಡೇಟಿಂಗ್ ಹೋಗಿದ್ದರು. ಈ ವೇಳೆ ಇಬ್ಬರು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ರಸ್ತೆ ದಾಟಿದ್ದಾರೆ. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

View this post on Instagram

 

A post shared by Manav Manglani (@manav.manglani)

ಸಂತನು ಹಜರಿಕ್ ಒಬ್ಬ ಡೂಡಲ್ ಆರ್ಟಿಸ್ಟ್ ಮತ್ತು ಚಿತ್ರಗಾರ ಆಗಿದ್ದು, ಅವರ ಇನ್ ಸ್ಟಾಗ್ರಾಮ್ ಖಾತೆ ವಿವರದಲ್ಲಿ 2014ರ ಡೂಡಲ್ ಆರ್ಟ್ ಸ್ಪರ್ಧೆಯಲ್ಲಿ ಗೆದ್ದಿದ್ದೇನೆ ಎಂದು ಹಾಕಿಕೊಂಡಿದ್ದಾರೆ. ಜೊತೆಗೆ ಗುವಾಹಾಟಿ ಕಲಾ ಯೋಜನೆಯ ಸಹ-ಸ್ಥಾಪಕರಾಗಿದ್ದಾರೆ.

ಇನ್ನೂ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಇಲ್ಲಿಯವರೆಗೂ 614 ಪೋಸ್ಟ್ ಹಾಕಿದ್ದು, 22 ಸಾವಿರ ಜನ ಫಾಲೋವರ್ಸ್ ಹೊಂದಿದ್ದಾರೆ. ಚಿತ್ರಕಾರರಾಗಲು ಎಂಜಿನಿಯರಿಂಗ್ ಉದ್ಯೋಗವನ್ನು ತೊರೆದಿದ್ದಾರೆ. ಅಲ್ಲದೆ ಹಿಪ್-ಹಾಪ್ ಕಲಾವಿದರಾದ ರಾಫ್ತಾರ್ ಮತ್ತು ಡಿವೈನ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *