Connect with us

Districts

SSLC ಪರೀಕ್ಷೆ ಬರೆಯಲು ಬಂದ ವೃದ್ಧ

Published

on

Share this

ಕೋಲಾರ: ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ವೃದ್ಧನೊಬ್ಬ ಉತ್ಸಾಹದಿಂದ ಆಗಮಿಸಿ ಪರೀಕ್ಷೆ ಬರೆದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿರುವ ಪರೀಕ್ಷೆ ಕೇಂದ್ರಕ್ಕೆ ಸುಮಾರು 55 ವರ್ಷದ ಕುರುಬರ ಪೇಟೆ ನಿವಾಸಿ ಮಂಜುನಾಥ್ ಆಗಮಿಸಿದರು. ಬೆಳಗ್ಗೆ 8:30 ಗಂಟೆಗೆ ಪರೀಕ್ಷೆ ಕೇಂದ್ರಕ್ಕೆ ಯಾವುದೇ ಮುಜಗರವಿಲ್ಲದೆ ಹೊಸ ಹುರುಪಿನಿಂದಲೇ ಪರೀಕ್ಷಾ ಕೆಂದ್ರಕ್ಕೆ ಬಂದರು.

ಸಾಮಾನ್ಯ ವಿದ್ಯಾರ್ಥಿ ರೀತಿಯಲ್ಲಿ ಆಗಮಿಸಿದ ಮಂಜುನಾಥ್, ಪೊಲೀಸ್ ಪೇದೆಯಾಗಿ 1,993ರಲ್ಲಿ ನೇಮಕಗೊಂಡಿದ್ದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಉತ್ತೀರ್ಣರಾದರೆ ಪ್ರಮೋಷನ್ ಸಿಗಲಿದ್ದು, ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಪರೀಕ್ಷೆ ಬರೆಯುತ್ತಿದ್ದಾರೆ.

ಕಳೆದ ವರ್ಷ ಪರೀಕ್ಷೆಯಲ್ಲಿ ಎರಡು ವಿಷಯದಲ್ಲಿ ಉತ್ತೀರ್ಣರಾಗಿರುವ ಮಂಜುನಾಥ್ ಬಾಕಿ ಉಳಿದಿರುವ ನಾಲ್ಕು ವಿಷಯಗಳಿಗೆ ಪರೀಕ್ಷೆ ಬರೆಯುತ್ತಿದ್ದಾರೆ. ಇದನ್ನೂ ಓದಿ: ನೀವು ನೋಡಿಕೊಂಡ ಹಾಗೆ, ನಿಮ್ಮ ಮಕ್ಕಳನ್ನು ನೋಡಿಕೊಳ್ಳುತ್ತೇವೆ: ಸಚಿವ ಸುರೇಶ್ ಕುಮಾರ್

Click to comment

Leave a Reply

Your email address will not be published. Required fields are marked *

Advertisement