Connect with us

Districts

ಬ್ರಾಹ್ಮಣರಿಗೆ ಜಾತಿ, ಆದಾಯ ಪ್ರಮಾಣ ಪತ್ರ ನೀಡಲು ಅನುಮತಿ – ಸಿಎಂಗೆ ಧನ್ಯವಾದ ತಿಳಿಸಿದ ಸಚ್ಚಿದಾನಂದ ಮೂರ್ತಿ

Published

on

ಕೋಲಾರ: ಎಂಎಲ್‍ಸಿ ಆಕಾಂಕ್ಷಿಯಾಗಿದ್ದ ನನಗೆ ಮಂಡಳಿ ಅದ್ಯಕ್ಷರನ್ನಾಗಿ ಮಾಡಿದ್ದು, ಪ್ರಾರಂಭದಲ್ಲಿ ಇಷ್ವವಿರಲಿಲ್ಲ. ಆದರೆ ಇದೀಗ ತೃಪ್ತಿ ತಂದಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಕೋಲಾರದಲ್ಲಿ ಹೇಳಿದ್ದಾರೆ.

ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಶಾಸಕನಾಗಿ, ಎಂಎಲ್‍ಸಿ ಆಗಬೇಕೆಂಬುವ ಆಸೆ ಇತ್ತು. ಆದರೆ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದ್ದು, ಇದೀಗ ತೃಪ್ತಿತಂದಿದೆ ಎಂದರು. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಯಡಿಯೂರಪ್ಪ ಅವರು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡುವುದಕ್ಕೆ ಅನುಮತಿ ಕೊಟ್ಟಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಅಲ್ಲದೆ ಹಲವು ವರ್ಷಗಳಿಂದ ಬ್ರಾಹ್ಮಣರಿಗೆ ಜಾತಿ ಹಾಗೂ ಅದಾಯ ಪ್ರಮಾಣ ಪತ್ರವನ್ನು ನೀಡುತ್ತಿರಲಿಲ್ಲ. ಅನೇಕ ಬಾರಿ ಮನವಿ ಮಾಡಿಕೊಂಡ ನಂತರ ಇದೀಗ ಬ್ರಾಹ್ಮಣರಿಗೆ ಜಾತಿ ಹಾಗೂ ಆದಾಯ ಪತ್ರ ನೀಡುತ್ತಿರುವುದಕ್ಕೆ ಯಡಿಯೂರಪ್ಪ ಅವರಿಗೆ ಕೃತಜ್ಞತೆ ತಿಳಿಸಿದರು. ಅರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳ ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ವೇದ ಉಪನ್ಯಾಕರಿಗೆ ಸೇರಿದಂತೆ ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದೇ ತಿಂಗಳ 28ರಂದು ಬ್ರಾಹ್ಮಣರ ವೆಬ್‍ಸೈಟ್ ತೆರೆಯಲಾಗುತ್ತದೆ. ಆನ್‍ಲೈನ್ ಮೂಲಕ ಅರ್ಜಿಗಳನ್ನು ಹಾಕುವುದರ ಮೂಲಕ ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *