Friday, 23rd August 2019

ಕೋಲಾರ ಸಂಸದ ಮುನಿಸ್ವಾಮಿಗೆ ಬಿಸಿ ಮುಟ್ಟಿಸಿದ ಆಯೋಗ

ಕೋಲಾರ: ಈ ಬಾರಿ ಲೊಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾದ ಎಸ್ ಮುನಿಸ್ವಾಮಿ ಅವರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ.

ಜಿಲ್ಲೆಯಲ್ಲಿ ಲೋಕಸಭಾ ಸಮರ ಮುಗಿದಿದ್ದು, ಈಗ ಪುರಸಭೆ ಚುನಾವಣಾ ಕಾವು ಹೆಚ್ಚಾಗಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರವನ್ನು ಪಡೆಯಲು ಪ್ರಚಾರಕ್ಕಾಗಿ ಅಭ್ಯರ್ಥಿಗಳು ದೊಡ್ಡ ರಾಜಕಾರಣಿಗಳ ಮೊರೆ ಹೋಗಿದ್ದು, ಹೀಗೆ ಪ್ರಚಾರಕ್ಕೆ ಹೋದ ಎಸ್ ಮುನಿಸ್ವಾಮಿ ಅವರಿಗೆ ಪ್ರಚಾರ ಮಾಡದಂತೆ ಆಯೋಗ ನಿರ್ಬಂಧ ಹೇರಿದೆ.

ಬಂಗಾರಪೇಟೆ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯಥಿ ಪರ ರೋಡ್ ಶೋ ಮಾಡಿ ಪ್ರಚಾರ ಮಾಡಲು ಮುನಿಸ್ವಾಮಿ ಅವರು ಬೆಳಗ್ಗೆ ನಗರಕ್ಕೆ ಬಂದಿದ್ದಾರೆ. ಆದರೆ ಬಹಿರಂಗ ಪ್ರಚಾರಕ್ಕೆ ನೀಡಿದ್ದ ಸಮಯ ಮುಗಿದ ಕಾರಣ ಚುನಾವಣಾ ಅಧಿಕಾರಿ ಚಂದ್ರಮೌಳೀಶ್ವರ ಅವರು ಟಾಟಾ ಏಸ್ ವಾಹನ ಬಳಸಿ ಬಹಿರಂಗ ರೋಡ್ ಶೋ ಮಾಡಲು ಅವಕಾಶ ನೀಡಲಿಲ್ಲ. ಇದರಿಂದ ಸಂಸದರಾಗಿ ಆಯ್ಕೆಯಾದ ಮೊದಲ ಚುನಾವಣಾ ಪ್ರಚಾರದಲ್ಲೇ ಮುನಿಸ್ವಾಮಿ ಅವರಿಗೆ ಇರುಸು ಮುರಿಸು ಆಯ್ತು. ಇದನ್ನು ಓದಿ: ಬಿಎಸ್‍ವೈ ಕ್ಲಾಸ್ ಬೆನ್ನಲ್ಲೇ ಯೂಟರ್ನ್ ಹೊಡೆದ ಮುನಿಸ್ವಾಮಿ

ಚುನಾವಣಾಧಿಕಾ ಎಚ್ಚರದಿಂದ ಬೇಸರಗೊಂಡ ಸಂಸದ ಎಸ್ ಮುನಿಸ್ವಾಮಿ ಅವರು ವಾಹನದಿಂದ ಇಳಿದು ಮನೆ ಮನೆಗೆ ಹೋಗಿ ತಮ್ಮ ಅಭ್ಯರ್ಥಿ ಪರ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಮೇ 29ಕ್ಕೆ ಪುರಸಭೆ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *