ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ನ ಮೂರು ಮಾದರಿಯ ನಾಯಕರಾದ ಬಳಿಕ ಅವರ ಬ್ರಾಂಡ್ ವಾಲ್ಯೂ ದಿನಕ್ಕೆ 4.5-5 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಪ್ರಸ್ತುತ ಕೊಹ್ಲಿ 16 ಕಂಪೆನಿಗಳ ರಾಯಭಾರಿ ಆಗಿದ್ದು, ಇತ್ತೀಚೆಗೆ ಭಾರತದಲ್ಲಿ ಉಬರ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಇದರೊಂದಿಗೆ ಕೊಹ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
Advertisement
ಈ ಹಿಂದೆ ಪ್ರತಿದಿನ ಕೊಹ್ಲಿಯ ಬ್ರಾಂಡ್ ವಾಲ್ಯೂ ದಿನಕ್ಕೆ ನಾಲ್ಕು ಕೋಟಿ ರೂ. ಇದ್ದರೆ ಉಬರ್ ಜೊತೆಗಿನ ಒಪ್ಪಂದ ಬಳಿಕ ಈ ಮೊತ್ತ 4.5 -5 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಕಳೆದ ವರ್ಷದ ಆಕ್ಟೋಬರ್ ನಲ್ಲಿ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ 7 ನೇ ಸ್ಥಾನ ಪಡೆದಿದ್ದರು. ಪ್ರಸ್ತುತ ಕೊಹ್ಲಿ ಭಾರತದ ಟಾಪ್ ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದು, ಈಗ ಅವರ ವೇತನ, ಬೋನಸ್, ವಿವಿಧ ಮೂಲಗಳಿಂದ ಬರುತ್ತಿರುವ ಆದಾಯವನ್ನು ಲೆಕ್ಕ ಹಾಕಿದರೆ ಸುಮಾರು 144 ದಶಲಕ್ಷ ಅಮೆರಿಕನ್ ಡಾಲರ್(ಅಂದಾಜು 936 ಕೋಟಿ ರೂ.) ಬ್ರಾಂಡ್ ವಾಲ್ಯೂ ಹೊಂದಿದ್ದಾರೆ.
Advertisement
2017ರ ಭಾರತದ ಸ್ಟಾರ್ ಸೆಲೆಬ್ರಿಟಿ ಪಟ್ಟಿಯಲ್ಲಿ ವಿರಾಟ್ (936 ಕೋಟಿ ರೂ.) ಮೊದಲ ಸ್ಥಾನವನ್ನು ಪಡೆದಿದ್ದಾರೆ. ನಂತರದಲ್ಲಿ ಶಾರೂಖ್ ಖಾನ್ (689 ಕೋಟಿ ರೂ.), ದೀಪಿಕಾ ಪಡುಕೋಣೆ (604 ಕೋಟಿ ರೂ.), ಅಕ್ಷಯ್ ಕುಮಾರ್ (305 ಕೋಟಿ ರೂ.), ರಣವೀರ್ ಸಿಂಗ್ (273 ಕೋಟಿ ರೂ.) ಕಾಣಿಸಿಕೊಂಡಿದ್ದಾರೆ.
ಭಾರತವು ಉಬರ್ ಸಂಸ್ಥೆಯ ಅತ್ಯಂತ ಪ್ರಮುಖ ಮಾರುಕಟ್ಟೆ ಕ್ಷೇತ್ರವಾಗಿದ್ದು, ಕೊಹ್ಲಿ ಅವರನ್ನು ತಮ್ಮ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಮತ್ತಷ್ಟು ವ್ಯಾಪಾರವನ್ನು ವೃದ್ಧಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.