Connect with us

Crime

ಗುಪ್ತಾಂಗಕ್ಕೆ ಗಂಭೀರ ಗಾಯ- ಮೆಮೊರಿ ಲಾಸ್ ಆಗಿರೋ ಮಹಿಳೆಯ ಮೇಲೆ ರೇಪ್

Published

on

ಕೊಚ್ಚಿ: ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ 75 ವರ್ಷದ ಮಹಿಳೆಯ ಮೇಲೆ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ಎರ್ನಾಕುಲಂ ಜಿಲ್ಲೆಯ ಕೋಲೆಂಚೇರಿ ಗ್ರಾಮದಲ್ಲಿ ನಡೆದಿದೆ.

ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗಿದ್ದು, ಆಕೆಯ ಗುಪ್ತಾಂಗಕ್ಕೆ ಗಂಭೀರ ಗಾಯಗಳಾಗಿವೆ. ಕಾಮುಕರು ಮಹಿಳೆ ಗುಪ್ತಾಂಗಕ್ಕೆ ತೀಕ್ಷ್ಮವಾದ ವಸ್ತುವಿನಿಂದ ಗಾಯಮಾಡಿದ್ದಾರೆ. ಹೀಗಾಗಿ ಆಕೆಗೆ ತುರ್ತು ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಕೋಲೆಂಚೇರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Advertisement
Continue Reading Below

ಪುಥೆನ್‍ಕುರಿಶ್ ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. ಇಬ್ಬರು ಮಕ್ಕಳ ತಾಯಿಯ ಮೇಲೆ ಭಾನುವಾರ ಸಂಜೆ ಅತ್ಯಾಚಾರ ಎಸಗಿದ್ದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಮಹಿಳೆಗೆ ಮರೆಯುವ ಕಾಯಿಲೆಯಿಂದಾಗಿ ಆಕೆ ಘಟನೆ ಬಗ್ಗೆ ಸರಿಯಾಗಿ ಹೇಳುತ್ತಿಲ್ಲ. ಹೀಗಾಗಿ ಘಟನೆಯ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಲು ಪೊಲೀಸರು ಹಾಗೂ ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಈ ಪ್ರಕರಣದ ತನಿಖೆ ಸವಾಲಾಗಿದೆ. ಯಾಕಂದರೆ ಮಹಿಳೆಯ ಮಾನಸಿಕ ಸ್ಥಿತಿ ಕೂಡ ತೀರ ಹದಗೆಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಅಕ್ಕಪಕ್ಕದ ನಿವಾಸಿಗಳಾಗಿರುವ ವಲಸೆ ಕಾರ್ಮಿಕರು ಸೇರಿದಂತೆ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪುಥೆನ್‍ಕುರಿಶ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಗೋಡ್ ಗ್ರಾಮದಲ್ಲಿರುವ ಮತ್ತೊಂದು ಪೆರೋನ್‍ನ ನಿವಾಸದಲ್ಲಿ ಮಹಿಳೆ ದೌರ್ಜನ್ಯಕ್ಕೊಳಗಾಗಿದ್ದಾರೆ.

Click to comment

Leave a Reply

Your email address will not be published. Required fields are marked *