Connect with us

Cinema

ಹ್ಯಾಪಿ ಬರ್ತಡೇ ಮ್ಯಾಡ್ ಚೈಲ್ಡ್ – ಗಾಸಿಪ್ ಗರ್ಲ್‍ಫ್ರೆಂಡ್‍ಗೆ ರಾಹುಲ್ ವಿಶ್

Published

on

ನವದೆಹಲಿ: ತನ್ನ ಗಾಸಿಪ್ ಗೆಳತಿ ನಟಿ ಅತಿಯಾ ಶೆಟ್ಟಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಅವರು ಹುಟ್ಟುಹಬ್ಬದ ಶುಭಕೋರಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಬಾಲಿವುಡ್‍ನ ಹಿರಿಯ ನಟ ಸುನಿಲ್ ಶೆಟ್ಟಿಯವರ ಪುತ್ರಿ ಮತ್ತು ಭಾರತದ ಉಪನಾಯಕ ಕೆಎಲ್ ರಾಹುಲ್ ಗಾಸಿಪ್ ಗರ್ಲ್‍ಫ್ರೆಂಡ್ ಅತಿಯಾ ಶೆಟ್ಟಿ ಇಂದು ತಮ್ಮ 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಗೆಳತಿಯ ಹುಟ್ಟುಹಬ್ಬಕ್ಕೆ ಕೆಎಲ್ ರಾಹುಲ್ ಅವರು ಪ್ರೀತಿಯಿಂದ ವಿಶ್ ಮಾಡಿದ್ದು, ಇದನ್ನು ಅತಿಯಾ ಶೆಟ್ಟಿ ಇನ್‍ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

 

View this post on Instagram

 

Happy birthday mad child 🖤

A post shared by KL Rahul👑 (@rahulkl) on

ಅತಿಯಾ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ರಾಹುಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಹೆಗಲ ಮೇಲೆ ಅತಿಯಾ ತಲೆ ಇಟ್ಟಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ಮ್ಯಾಡ್ ಚೈಲ್ಡ್ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಕಳೆದ ಜೂನ್‍ನಲ್ಲಿ ನಡೆದ ರಾಹುಲ್ ಅವರ ಹುಟ್ಟುಹಬ್ಬಕ್ಕೂ ಕೂಡ ಅತಿಯಾ ಶೆಟ್ಟಿಯವರು ನನ್ನವನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.

ಈ ಹಿಂದೆ ಅಥಿಯಾ ಶೆಟ್ಟಿ ಬಿಳಿ ಶರ್ಟ್ ಧರಿಸಿ ಸ್ಟೈಲಿಶ್ ಆಗಿ ಪೋಸ್ ನೀಡಿದ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಫೋಟೋಗೆ ಗೆಳೆಯ ಕೆ.ಎಲ್ ರಾಹುಲ್ `ಒಳ್ಳೆಯ ಶರ್ಟ್’ ಎಂದು ಕಾಮೆಂಟ್ ಮಾಡಿದ್ದರು. ಅಭಿಮಾನಿಗಳಿಗೆ ಇಷ್ಟೇ ಸಾಕಿತ್ತು ಅಥಿಯಾ, ರಾಹುಲ್‍ರ ಕಾಲೆಳೆಯಲು ಆರಂಭಿಸಿದ್ದರು. ಹೀಗಾಗಿ ರಾಹುಲ್ ಕಾಮೆಂಟ್ ಕಾರಣಕ್ಕೆ ಅಥಿಯಾ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು.

ಕೆಲವರು ಈ ಶರ್ಟ್ ಬಹುಶಃ ನಿಮ್ಮದಾಗಿರಬೇಕು ಎಂದು ರಾಹುಲ್ ಕಾಲೆಳೆದರೆ, ಶರ್ಟ್ ನಿಮಗೆ ಇಷ್ಟವಾಗಿದೆಯಾ ಎಂದು ಕೆಲವರು ಪ್ರಶ್ನಿಸಿದ್ದರು. ಇನ್ನು ಕೆಲವರಂತೂ ನಿಮ್ಮಿಬ್ಬರ ಜೋಡಿ ಫೋಟೊವನ್ನು ಹಂಚಿಕೊಳ್ಳಿ ಎಂದು ಬೇಡಿಕೆಯಿಟ್ಟಿದ್ದರು. ಅಷ್ಟಕ್ಕೂ ರಾಹುಲ್ ಕಾಮೆಂಟ್ ಜೊತೆಗೆ ಈ ಫೋಟೋ ವೈರಲ್ ಆಗೋದಕ್ಕೆ ಮತ್ತೊಂದು ಕಾರಣವೂ ಇದೆ. ಇಲ್ಲಿ ಅಥಿಯಾ ತನ್ನದಲ್ಲದ ಸೈಜ್‍ನ ಶರ್ಟ್ ಧರಿಸಿದ್ದರು. ಇದೇ ಕಾರಣಕ್ಕೆ ಕೆಎಲ್ ರಾಹುಲ್ ಕಾಮೆಂಟ್ ಜೊತೆಗೆ ಅಭಿಮಾನಿಗಳು ತಮಾಷೆ ಮಾಡಿ ಟ್ರೋಲ್ ಮಾಡಿದ್ದರು.

ಸದ್ಯ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-2020ಯಿಂದ ಹೊರಗೆ ಬಿದ್ದಿದೆ. ನಾಯಕನಾಗಿ ರಾಹುಲ್ ವಿಫಲರಾದರೂ ಬ್ಯಾಟ್ಸ್ ಮ್ಯಾನ್ ಆಗಿ ಮಿಂಚಿದ್ದಾರೆ. ಐಪಿಎಲ್-2020ಯಲ್ಲಿ ತಾವು ಆಡಿದ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕದ ಸಹಾಯದಿಂದ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ತಂಡದ ಉಪನಾಯಕನಾಗಿಯೂ ಆಯ್ಕೆ ಆಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in