Latest
1 ರನ್ ಅಗತ್ಯವಿದ್ದಾಗ ಕೊಹ್ಲಿ 2 ರನ್ ಓಡಿದ್ದು ಯಾಕೆ?

ಅಬುಧಾಬಿ: ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಕೊನೆಗೆ 2 ರನ್ ಓಡಿದ್ದಕ್ಕೆ ಜನ ಸ್ವಾರಸ್ಯಕರ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಬೆಂಗಳೂರು 13.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿತು.
Virat Kohli even after requiring 1 run to win, ran 2 runs there to seal the game. His love for twos is totally commendable.@sreshthx#RCBvsKKR #IPL2020
— Adnan Khan (@Kh14245350Adnan) October 21, 2020
ಕೊನೆಗೆ ಒಂದು ರನ್ ಬೇಕಿದ್ದಾಗ ವಿರಾಟ್ ಕೊಹ್ಲಿ ಸ್ಟ್ರೈಕ್ನಲ್ಲಿದ್ದರು. ಕೃಷ್ಣ ಎಸೆದ ಬಾಲನ್ನು ಕೊಹ್ಲಿ ಥರ್ಡ್ ಮ್ಯಾನ್ ಕಡೆಗೆ ಹೊಡೆದರು. ಈ ವೇಳೆ ಒಂದು ರನ್ ಓಡುವುದರ ಜೊತೆಗೆ ಕೊಹ್ಲಿ ಎರಡು ರನ್ ಓಡಿದ್ದಾರೆ. ಆದರೆ ಒಂದು ರನ್ ಮಾತ್ರ ಪರಿಗಣಿಸಲಾಯಿತು. ಇದನ್ನೂ ಓದಿ: ಪಂದ್ಯ ಒಂದು ಆರ್ಸಿಬಿ ಬೌಲರ್ಗಳ ದಾಖಲೆ ಹಲವು
How much Virat Kohli loves batting.
"The team RCB needed 1 runs to win but Virat Kohli ran 2 runs. And Completed 2 runs with running between the Wickets."
This Guy @imVkohli is made for Cricket only, it's Unbelievable🙌!! #GOAT🐐 #RCBvsKKR pic.twitter.com/PNSd51XS8S
— CricketMAN2 (@man4_cricket) October 21, 2020
ಈಗ ಎರಡು ರನ್ ಓಡಿದ್ದರ ಬಗ್ಗೆ ಜನ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕೊಹ್ಲಿಗೆ 2 ರನ್ ಓಡಿ ಅಭ್ಯಾಸ ಆಗಿರಬೇಕು ಎಂದಿದ್ದಾರೆ.
So if a batsman hits a 6 with only 1 run to win, the score still increases by a 6 and the score difference between the two teams would be of an actual 6 runs, but today when Kohli ran the 2nd run with only 1 run to win, the score difference is still 1 and not 2? Just saying 😛🤷♀️
— Naoghare Akshat Manish (@ANaoghare) October 21, 2020
ಇನ್ನು ಕೆಲವರು ಕೊನೆಗೆ 1 ರನ್ ಇದ್ದಾಗ ಸಿಕ್ಸ್ ಹೊಡೆದರೆ ಅದು ತಂಡದ ಒಟ್ಟು ರನ್ಗೆ ಸೇರ್ಪಡೆಯಾಗುತ್ತದೆ. ಹೀಗಿರುವಾಗ 2 ರನ್ ಓಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
Forget about net run rate..Virat kohli's aim is to be in top 2 at the end
— PJ-27-10 (@27_pratik) October 21, 2020
ಪಂದ್ಯದಲ್ಲಿ ಪಡಿಕ್ಕಲ್ 25 ರನ್, ಫಿಂಚ್ 16 ರನ್, ಗುರುಕೀರತ್ ಸಿಂಗ್ ಔಟಾಗದೇ 21, ಕೊಹ್ಲಿ ಔಟಾಗದೇ 18 ರನ್ ಹೊಡೆದರು. 4 ಓವರ್ನಲ್ಲಿ 2 ಮೇಡನ್ ಮಾಡಿ 8 ರನ್ ನೀಡಿ 3 ವಿಕೆಟ್ ಕಿತ್ತ ಮೊಹಮ್ಮದ್ ಸಿರಾಜ್ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
CRED Power Player of Match 39 between @KKRiders and @RCBTweets is Mohammed Siraj.@CRED_club #CREDPowerplay #Dream11IPL pic.twitter.com/oSKjcxuaX3
— IndianPremierLeague (@IPL) October 21, 2020
