Advertisements

1 ಕೋಟಿಯ ಕಾರು ಜೊತೆಗೆ 1 ವರ್ಷ ಡೀಸೆಲ್ ಭಾಗ್ಯ – ಮಾಜಿ ಸಿಎಂಗೆ ಜಾರ್ಜ್ ಭರ್ಜರಿ ಗಿಫ್ಟ್!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಇನ್ನೋವಾ ಕಾರಿನಲ್ಲಿ ಓಡಾಟ ಮಾಡುತ್ತಿದ್ದರು. ಇವರ ಸ್ಥಿತಿಯನ್ನು ನೋಡಿ ಕುಚುಕು ಗೆಳೆಯ ಮಾಜಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ದುಬಾರಿ ಕಾರನ್ನು ಗಿಫ್ಟ್ ನೀಡಿದ್ದಾರೆ.

Advertisements

ಅಧಿಕಾರಿದಲ್ಲಿದ್ದಾಗ ಸರ್ಕಾರದ ಕಾರಿನಲ್ಲಿ ಸಿದ್ದರಾಮಯ್ಯ ಓಡಾಡುತ್ತಿದ್ದರು. ಆದರೆ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಅವರು ಇನ್ನೋವಾ ಕಾರಿನಲ್ಲಿ ಓಡಾಟ ನಡೆಸುತ್ತಿದ್ದರು. ಸಿದ್ದರಾಮಯ್ಯ ಸ್ಥಿತಿ ನೋಡಿ ಗೆಳೆಯ ಜಾರ್ಜ್ ಮರುಕ ಪಟ್ಟು ಅವರಿಗಾಗಿ ಒಂದು ದುಬಾರಿ ಮೊತ್ತದ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರು ಖರೀದಿಸಿ ಕೊಟ್ಟಿದ್ದಾರೆ.

ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರಿಗೆ ಒಂದು ಕೋಟಿ ರೂ. ಬೆಲೆಯಿದೆ. ಕಾರು ಅಲ್ಲದೇ ಒಂದು ವರ್ಷಕ್ಕೆ ಸಾಕಾಗುವಷ್ಟು ಡೀಸೆಲ್ ಕೂಪನ್ ಕೂಡ ಜಾರ್ಜ್ ನೀಡಿದ್ದಾರೆ.

Advertisements

ಸಿದ್ದರಾಮಯ್ಯನವರನ್ನು ಮನೆಗೆ ಕರೆದು ಉಪಚಾರ ಮಾಡಿದ ಜಾರ್ಜ್, ಇನ್ನು ಮುಂದೆ ನೀವು ಈ ಇನ್ನೋವಾ ಕಾರಲ್ಲಿ ಓಡಾಡಬೇಡಿ. ನಿಮಗಾಗಿ ಒಂದು ಹೊಸ ಕಾರು ಖರೀದಿಸಿದ್ದೇನೆ. ಇದನ್ನು ತೆಗೆದುಕೊಳ್ಳಿ. ಈ ಹೊಸ ಕಾರಲ್ಲಿ ನೀವು ಓಡಾಡಿ ಎಂದು ಹೇಳಿ ಪ್ರಾಡೋ ಕಾರಿನ ಕೀ ಕೊಟ್ಟಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಒಲ್ಲದ ಮನಸ್ಸಿಂದಲೇ ಕೋಟಿ ರೂ. ಮೌಲ್ಯದ ಹೊಸ ಕಾರನ್ನು ಪಡೆದಿದ್ದು, ಈಗ ಸಿದ್ದರಾಮಯ್ಯ ಕೆಜೆ ಜಾರ್ಜ್ ಕೊಟ್ಟ ಹೊಸ ಕಾರಿನಲ್ಲಿಯೇ ಓಡಾಟ ನಡೆಸಿದ್ದಾರೆ.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರ ಜೊತೆಯಲ್ಲೇ ಇದ್ದ ಗೆಳೆಯ ಮಾಜಿ ಲೋಕೋಪಯೋಗಿ ಸಚಿವ ಮಹದೇವಪ್ಪ, ಚುನಾವಣೆ ಸಂದರ್ಭದಲ್ಲಿ ಮಗನಿಗೆ ಟಿಕೆಟ್ ಕೊಡಿಸಿಲಿಲ್ಲ ಎಂದು ಅಸಮಾಧಾನಗೊಂಡು ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ದೂರವಾಗಿದ್ದರು.

Advertisements

ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಸಿಕ್ಕಿದರೆ ಅವರ ಮಗ ಯತೀಂದ್ರಗೆ ವರುಣಾ ಕ್ಷೇತ್ರದ ಟಿಕೆಟ್ ಸಿಕ್ಕಿತ್ತು. ಮಹದೇವಪ್ಪ ಲಾಬಿ ಮಾಡಿದ್ದರೂ ಅವರ ಮಗನಿಗೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಆಪ್ತರ ಜೊತೆ ಸಿಎಂಗೆ ಒಂದು ನ್ಯಾಯ ಬೇರೆಯವರಿಗೆ ಇನ್ನೊಂದು ನ್ಯಾಯ ಎಂದು ಹೇಳಿ ತಮ್ಮ ಅಸಮಾಧಾನವನ್ನು ಮಹದೇವಪ್ಪ ಹೊರ ಹಾಕುತ್ತಿದ್ದರು ಎಂದು ಮೂಲಗಳು ತಿಳಿಸಿತ್ತು.

Advertisements
Exit mobile version