Connect with us

Bollywood

ತಂಗಿಯ ಬಿಕಿನಿ ಫೋಟೋಗೆ ಅಣ್ಣ ಟೈಗರ್ ಶ್ರಾಫ್ ಕಮೆಂಟ್

Published

on

– ರೆಡ್ ಬಿಕಿನಿಯಲ್ಲಿ ದಪ್ಪ ಕಾಣ್ತೀನಿ ಎಂದ ಕೃಷ್ಣ

ಮುಂಬೈ: ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಪುತ್ರಿ, ಟೈಗರ್ ಶ್ರಾಫ್ ಸೋದರಿ ಕೃಷ್ಣಾ ಸದಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಕೃಷ್ಣಾಳ ರೆಡ್ ಬಿಕಿನಿಯ ಫೋಟೋಗೆ ಟೈಗರ್ ಶ್ರಾಫ್ ಫನ್ನಿ ಕಮೆಂಟ್ ಮಾಡುವ ಮೂಲಕ ಸೋದರಿಯ ಕಾಲೆಳೆದಿದ್ದಾರೆ.

ಕೃಷ್ಣಾ ಶ್ರಾಫ್ ಸಿನಿಮಾಗಳಲ್ಲಿ ನಟಿಸಿದಿದ್ರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಸೆಲೆಬ್ರಿಟಿ. ಗೆಳೆಯನ ಜೊತೆಗಿನ ರೊಮ್ಯಾನ್ಸ್, ಲಿಪ್ ಲಾಕ್, ಹಾಟ್ ಆ್ಯಂಡ್ ಸೆಕ್ಸಿ ಫೋಟೋ ಅಪ್ಲೋಡ್ ಮಾಡುತ್ತಾ ತನ್ನದೇ ಆದ ಪಡ್ಡೆ ಹುಡುಗರ ಫ್ಯಾನ್ ಫಾಲೋವರ್ಸ್ ತಂಡವೇ ಕೃಷ್ಣಾಗಿದೆ.

ಇದೀಗ ಈಜುಕೊಳದ ದಡದ ಮೇಲೆ ರೆಡ್ ಬಿಕಿನಿ ತೊಟ್ಟು, ಕೈಯಲ್ಲಿ ಜ್ಯೂಸ್ ಗ್ಲಾಸ್ ಹಿಡಿದು ಕುಳಿತಿರುವ ವೀಡಿಯೋ ತುಣುಕನ್ನ ಕೃಷ್ಣಾ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದು, ಚಳಿಯಲ್ಲಿ ಕುಳಿತ ಹುಡುಗರ ನಶೆ ಏರಿಸಿದೆ. ಫೋಟೋ ಪೋಸ್ಟ್ ಮಾಡಿ, ಈ ಕೆಂಪು ಬಿಕಿನಿಯಲ್ಲಿ ದಪ್ಪ ಕಾಣಿಸ್ತೀನಿ ಅಲ್ವಾ ಎಂದು ಸಹ ಬರೆದುಕೊಂಡಿದ್ದಾರೆ. ಇದೇ ಫೋಟೋಗೆ ಕಮೆಂಟ್ ಮಾಡಿರೋ ಟೈಗರ್ ಶ್ರಾಫ್, ನಿಜವಾಗಲೂ ತುಂಬಾ ದಪ್ಪ ಕಾಣಿಸ್ತಿದ್ದೀಯಾ ಎಂದು ಫನ್ನಿ ಕಮೆಂಟ್ ಮಾಡಿದ್ದಾರೆ.

ಬಣ್ಣದ ಲೋಕಕ್ಕೆ ಕೃಷ್ಣಾ ಕಾಲಿಡದಿದ್ರೂ ಯಾವ ನಟಿಗೂ ಕಡಿಮೆ ಇಲ್ಲ ಅನ್ನುವಂತೆ ಫಿಟ್ ಆಗಿದ್ದಾರೆ. ಇತ್ತ ಟೈಗರ್ ಶ್ರಾಫ್ ಸಹ ಮಾಲ್ಡಿವ್ಸ್ ಗೆ ತೆರಳಿದ್ದು ಎಂಜಾಯ್ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *