Connect with us

Dakshina Kannada

ರೈ ವಿರುದ್ಧ ಮಾತನಾಡಿದ್ರೆ ನಿನ್ನ ಕೊಲೆ ಮಾಡಿ ನಿನ್ ಹೆಂಡ್ತಿನಾ ರೇಪ್ ಮಾಡ್ತಿವಿ- ಹರಿಕೃಷ್ಣ ಬಂಟ್ವಾಳ್ ಗೆ ಬೆದರಿಕೆ

Published

on

ಮಂಗಳೂರು: ಇಲ್ಲಿನ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್‍ಗೆ ಪತ್ರದ ಮೂಲಕ ಕೊಲೆ ಬೆದರಿಕೆಯೊಂದು ಬಂದಿದೆ.

ಕಳೆದ ಒಂದು ವಾರದಿಂದ ಹತ್ತಾರು ಬೆದರಿಕೆ ಪತ್ರಗಳು ಬರುತ್ತಿದ್ದು, ಕೆಲವೊಂದರಲ್ಲಿ ನಿನ್ನನ್ನು ಕೊಂದು, ನಿನ್ನ ಪತ್ನಿಯನ್ನೂ ಅತ್ಯಾಚಾರ ಮಾಡುವುದಾಗಿಯೂ ಬೆದರಿಕೆ ಹಾಕಲಾಗಿದೆ. ಸಚಿವ ರಮಾನಾಥ ರೈ ವಿರುದ್ಧವಾಗಿ ಇನ್ಮುಂದೆ ಮಾತನಾಡಿದ್ರೆ ಪತ್ರದಲ್ಲಿರುವ ವಿಚಾರಗಳನ್ನು ನಿಜವಾಗಿಸುತ್ತೇವೆ ಎಂದು ಬರೆಯಲಾಗಿದೆ.

ಕಾಂಗ್ರೆಸ್‍ನ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರನ್ನು ರಮಾನಾಥ ರೈ ಹೀನಾಯವಾಗಿ ನಡೆಸಿಕೊಳ್ತಿದ್ದಾರೆ ಅಂತ ಹರಿಕೃಷ್ಣ ಬಂಟ್ವಾಳ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇತ್ತೀಚೆಗೆ ಜನಾರ್ದನ ಪೂಜಾರಿಗೆ ರಮಾನಾಥ ರೈ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನ್ನೂ ಹರಿಕೃಷ್ಣ ಬಂಟ್ವಾಳ್ ಬಯಲು ಮಾಡಿದ್ದರು. ಹೀಗಾಗಿ ಇದೆಲ್ಲವೂ ರಮಾನಾಥ ರೈ ಅವರ ಆಪ್ತರೇ ಮಾಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದರೆ ಪ್ರಯೋಜನವಿಲ್ಲ ಎಂದು ಸುಮ್ಮನಿರಲು ನಿರ್ಧರಿಸಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.