Connect with us

Cinema

ತೆಲುಗು ಬಿಗ್‍ಬಾಸ್ ವೇದಿಕೆ ಏರಿದ ಕಿಚ್ಚ ಸುದೀಪ್

Published

on

ಹೈದ್ರಾಬಾದ್: ಖ್ಯಾತ ನಟ ನಾಗಾರ್ಜುನ್ ಅಕ್ಕಿನೇನಿ ತೆಲುಗು ಬಿಗ್ ಬಾಸ್ ಸೀಸನ್ 4ರ ನಿರೂಪಕರಾಗಿದ್ದಾರೆ. ಆದರೆ ಇಂದಿನ ವಾರದ ಕಾರ್ಯಕ್ರಮದಲ್ಲಿ ಕನ್ನಡದ ಕಿಚ್ಚ ಸುದೀಪ್ ಅತಿಥಿಯಾಗಿ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ತೆಲುಗು ಬಿಗ್‍ಬಾಸ್ ವೇದಿಕೆಯ ಮೇಲೆ ಕಿಚ್ಚನನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಒಂಟಿ ಮನೆಯಲ್ಲಿರುವ ಸ್ಪರ್ಧಿಗಳು ವೇದಿಕೆಯ ಮೇಲೆ ಕಿಚ್ಚನನ್ನು ಕಂಡು ಅಚ್ಚರಿಗೊಂಡಿದ್ದಾರೆ ಅಲ್ಲದೆ, ಸಂತೋಷದಿಂದ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ. ನಾಗಾರ್ಜುನ್ ಸರ್ ಎಲ್ಲಿ ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಎಂದರೆ ನಮಗೆ ತುಂಬಾ ಇಷ್ಟ ಎಂದು ಸ್ಪರ್ಧಿಗಳು ಹೇಳಿದ್ದಾರೆ. ಸದ್ಯ ಕಾರ್ಯಕ್ರಮದ ಪ್ರೋಮೋ ಬಿಡುಗಡೆಗೊಂಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕನ್ನಡದ ಖಾಸಗಿ ಮಾಧ್ಯಮವೊಂದರಲ್ಲಿ ಪ್ರಸಾರವಾಗುವ ಕನ್ನಡದ ಬಿಗ್‍ಬಾಸ್ ಸೀಸನ್ 8 ಪ್ರಾರಂಭಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ವೇಳೆ ಸುದೀಪ್ ತೆಲುಗು ಬಿಗ್ ಬಾಸ್ ವೇದಿಕೆಗೆ ಅತಿಥಿಯಾಗಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

15 ನಿಮಿಷಗಳ ಕಾಲ ಬಿಗ್‍ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿರುವ ಕಿಚ್ಚ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಸುದೀಪ್ ಅವರು ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿರುವ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳಿಂದ ಕಮೆಂಟ್ ಮತ್ತು ಟ್ವೀಟ್‍ಗಳ ಸುರಿಮಳೆಯೇ ಹರಿದು ಬಂದಿದೆ.

ಸ್ಪರ್ಧಿಗಳೊಂದಿಗೆ ಕನ್ನಡ ಮಾತನಾಡಿದ ಕಿಚ್ಚ
ತೆಲುಗು ಬಿಗ್ ಬಾಸ್ ವೀದಿಕೆಯಲ್ಲಿ ಕಿಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ ಎಂದು ನಾಗಾರ್ಜುನ್ ಹೇಳಿದ್ದಾಗ ಸ್ಪರ್ಧಿಯೊಬ್ಬರು ಚೆನ್ನಾಗಿದ್ದೀರಾ ಸರ್ ಎಂದು ಸುದೀಪ್‍ಗೆ ಕೇಳಿದ್ದಾರೆ, ಇದೆಲ್ಲ ಪ್ರೋಮೋದಲ್ಲಿ ಸಖತ್ ಹೈಲೆಟ್ ಆಗಿದೆ.

 

View this post on Instagram

 

A post shared by KicchaSudeepa (@kichchasudeepa)

ತೆಲುಗು ಬಿಗ್ ಬಾಸ್ ರೀಯಾಲಿಟಿ ಶೋಗೆ ಅತಿಥಿಯಾಗಿ ಹೋಗಿದ್ದೆ. ಎಂದಿಗೂ ಆಕರ್ಷಕರಾಗಿರುವ ನಾಗಾರ್ಜುನ್ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಅದ್ಭುತವಾಗಿತ್ತು. ಮನೆಯ ಒಳಗೆ ಇರುವ ಸ್ಪರ್ಧಿಗಳೊಂದಿಗೆ ಮಾತನಾಡಿದೆ. ಬಿಗ್ ಬಾಸ್ ನಿರೂಪಣೆ ಮಾಡುವುದು ಯಾವಾಗಲೂ ಸೇಷಲ್ ಫಿಲಿಂಗ್ ಆಗಿದೆ ಎಂದು ಸುದೀಪ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಿಗ್‍ಬಾಸ್ ಸೀಸನ್ 4ರಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಅವರ ನಿರೂಪಣಾ ಕೌಶಲ್ಯದಿಂದ ಎಲ್ಲರನ್ನು ವಿಸ್ಮಯಗೊಳಿಸಿದ್ದಾರೆ. ಕಿಚ್ಚ ಅವರು ತೆಲುಗು ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿರುವ ಎಪಿಸೋಡ್ ಪ್ರಸಾರವಾಗುತ್ತಿದ್ದಂತೆ ನೆಟ್ಟಿಗರು ಮೆಚ್ಚಿ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in