Connect with us

ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಬಿಕಿನಿ ಧರಿಸಿ ಹಾಟ್ ಆಗಿ ಪೋಸ್ ಕೊಟ್ಟಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರಿಗೆ ಜೋಡಿಯಾಗುವ ಮೂಲಕ ಬಿಟೌನ್‍ನಲ್ಲಿ ಶೈನ್ ಆಗುತ್ತಿರುವ ನಟಿ ಕಿಯಾರಾ ಅಡ್ವಾನಿ ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಫೋಟೋದಲ್ಲಿ ಕಿಯಾರಾ ಗ್ರೀನ್ ಕಲರ್ ಬಿಕಿನಿ ತೊಟ್ಟು ಸ್ವಿಮಿಂಗ್ ಪೂಲ್ ಒಳಗೆ ಈಜುತ್ತಿರುವಂತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದ್ದು, ಕಿಯಾರಾ ಬೋಲ್ಡ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದನ್ನು ಓದಿ: ಕಂಗನಾ ರಣಾವತ್ ಗನ್ ಮ್ಯಾನ್ ಮಂಡ್ಯದಲ್ಲಿ ಅರೆಸ್ಟ್

ಫೋಟೋ ಜೊತೆಗೆ ಕಿಯಾರಾ, ಅಲೆಗಳನ್ನು ನೀವು ತಡೆಯಲು ಆಗುವುದಿಲ್ಲ. ಆದರೆ ಈಜುವುದನ್ನು ನೀವು ಕಲಿಯಬಹುದು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋವನ್ನು ಕಿಯಾರಾ ತಮ್ಮ ಬಾಯ್ ಫ್ರೆಂಡ್ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದ ವೇಳೆ ಈ ಫೋಟೋವನ್ನು ಕ್ಲಿಕ್ಕಿಸಿರಬಹುದು ಎಂದು ಹೇಳಲಾಗುತ್ತಿದೆ.

 

View this post on Instagram

 

A post shared by KIARA (@kiaraaliaadvani)

ಎಂ.ಎಸ್ ಧೋನಿ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟ ಕಿಯಾರಾ ಮೊದಲ ಸಿನಿಮಾದಲ್ಲಿಯೇ ಖ್ಯಾತಿ ಪಡೆದರು. ನಂತರ ಟಾಲಿವುಡ್‍ನಲ್ಲಿ ಭರತ್ ಅನೆ ನೇನು ಸಿನಿಮಾದಲ್ಲಿ ನಟ ಮಹೇಶ್ ಬಾಬುಗೆ ನಾಯಕಿಯಾಗಿ ಅಭಿನಯಿಸಿದರು. ಇತ್ತೀಚೆಗೆ ನಟ ಶಾಹಿದ್ ಕಪೂರ್‍ಗೆ ಮತ್ತೊಮ್ಮೆ ಸಕ್ಸಸ್ ತಂದು ಕೊಟ್ಟ ಕಬೀರ್ ಸಿಂಗ್ ಚಿತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ಲಕ್ಷ್ಮಿ ಬಾಂಬ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಗೆ  ಜೋಡಿಯಾಗಿ ಮಿಂಚಿದ್ದರು.

Advertisement
Advertisement