Connect with us

Bengaluru City

ಇಂದು ಸಂಜೆ 6.32ಕ್ಕೆ ಕೆಜಿಎಫ್-2 ರಿಲೀಸ್ ದಿನಾಂಕ ಘೋಷಣೆ

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್- 2 ಸಿನಿಮಾ ರಿಲೀಸ್ ದಿನಾಂಕ ಇಂದು ಸಂಜೆ ಘೋಷಣೆಯಾಗುತ್ತದೆ.

ಈ ಸಂಬಂಧ ಟ್ವೀಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್- 2 ಚಿತ್ರ ಬಿಡುಗಡೆಯಾಗುವ ದಿನಾಂಕವನ್ನು ಇಂದು ಸಂಜೆ 6.32ಕ್ಕೆ ಘೋಷಣೆ ಮಾಡಲಾಗುವುದು ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ದಾಖಲೆ ಬರೆದಿತ್ತು. ಸಿನಿಮಾದ ಟೀಸರ್ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್ ನಂ.1 ಆಗಿತ್ತು. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಕೆಜಿಎಫ್-2 ಟೀಸರ್ ಎಲ್ಲಾ ಸಿನಿ ಇಂಡಸ್ಟ್ರಿ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿತ್ತು. ಅಲ್ಲದೆ ಟಾಲಿವುಡ್‍ನಲ್ಲಿ ಅಬ್ಬರಿಸಿದ ನಟ ಡಾರ್ಲಿಂಗ್ ಪ್ರಭಾಸ್ ಬಾಹುಬಲಿ ಚಿತ್ರದ ರೆಕಾರ್ಡ್ ನನ್ನು ಕೆಜಿಎಫ್-2 ಬ್ರೇಕ್ ಮಾಡಿ ಯೂಟ್ಯೂಬ್‍ನಲ್ಲಿ ಮುನ್ನುಗ್ಗಿತ್ತು.

ಕೆಜಿಎಫ್-2 ಟೀಸರ್ ರಿಲೀಸ್ ಆದ 48 ಗಂಟೆಗಳಲ್ಲಿ 116 ಮಿಲಿಯನ್ ವಿವ್ಸ್ ಪಡೆದ ಕೆಜಿಎಫ್-2, ಈ ಹಿಂದೆ ಟಾಲಿವುಡ್ ನಟ ಪ್ರಭಾಸ್ ಅಭಿನಯದ ಬಾಹುಬಲಿ-2 ಸಿನಿಮಾದ ಟ್ರೇಲರ್ ರೆಕಾರ್ಡ್‍ನನ್ನು ಬ್ರೇಕ್ ಮಾಡುವುದರ ಮೂಲಕ ಕೆಜಿಎಫ್ ಹಿಂದಿಕ್ಕಿತ್ತು.

ಬಾಹುಬಲಿ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟ ಅಲಂಕರಿಸಿದ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯಿಸಿದ್ದ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆಯಾದಾಗ 116 ಮಿಲಿಯನ್ ವಿವ್ಸ್ ಪಡೆದಿತ್ತು. ಆದ್ರೆ ಕೆಜಿಎಫ್-2 ಟೀಸರ್ ಬಾಹುಬಲಿ ಸಿನಿಮಾಕ್ಕಿಂತ ಕಡಿಮೆ ಅವಧಿಯಲ್ಲಿ 116 ಮಿಲಿಯನ್ ವಿವ್ಸ್ ದಾಟಿ ಮುನ್ನುಗ್ಗಿತ್ತು. ಟೀಸರ್ ಹವಾ ನೋಡಿ ಪರಭಾಷ ಸಿನಿಪಂಡಿತರು ಶಾಕ್ ಆಗಿದ್ದಾರೆ. ಅಲ್ಲದೆ ಚಿತ್ರಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಗೆ ಬೇರೆ ಭಾಷೆಯ ಕಲಾವಿದರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಶಾಂತ್ ನೀಲ್ ಮೇಕಿಂಗ್ ರಾಕಿಂಗ್ ಸ್ಟಾರ್ ಲುಕ್‍ಗೆ ಜನ ಫಿದಾ ಆಗಿದ್ದು, ಬಿಗ್ ಸ್ಕ್ರೀನ್‍ನಲ್ಲಿ ರಾಕಿ ಭಾಯ್ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

Click to comment

Leave a Reply

Your email address will not be published. Required fields are marked *