Thursday, 14th November 2019

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ವಿಲನ್

ಬೆಂಗಳೂರು: ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾ ಕರ್ನಾಟಕ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗಿ ಹವಾ ಸೃಷ್ಟಿಸಿತ್ತು. ಈಗ ಇದೇ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ನಟ ಜಾನ್ ಕೊಕ್ಕೇನ್  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟ ಜಾನ್ ಕೊಕ್ಕೇನ್ ಅವರು ‘ಕೆಜಿಎಫ್’ ಸಿನಿಮಾದಲ್ಲಿ ಜಾನ್ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೊಕ್ಕೇನ್ ಅವರು ಮೂಲತಃ ಕೇರಳದ ಹುಡುಗಿಯಾದ ಪೂಜಾ ರಾಮಚಂದ್ರನ್ ಜೊತೆ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊಕ್ಕೇನ್ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಾಕುವ ಮೂಲಕ ತಮ್ಮ ಮದುವೆಯ ಬಗ್ಗೆ ಹೇಳಿದ್ದಾರೆ. ಕೇರಳ ರಾಜ್ಯದಲ್ಲಿ ವಿಷು ಹಬ್ಬವನ್ನು ಸೋಮವಾರ ಅದ್ಧೂರಿಯಾಗಿ ಆಚರಿಸಲಾಗಿದೆ. (ಕರ್ನಾಟದಲ್ಲಿ ಚಂದ್ರಮಾನ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ಅದೇ ರೀತಿ ಸೌರಮಾನ ಯುಗಾದಿ ಹಬ್ಬವನ್ನು ಮಂಗಳೂರು, ಕೇರಳದಲ್ಲಿ ಆಚರಿಸುತ್ತಾರೆ. ಈ ಹಬ್ಬವನ್ನು ವಿಷು ಹಬ್ಬ ಎಂದು ಸಂಭ್ರಮಮಿಸುತ್ತಾರೆ.) ಈ ಹಬ್ಬದ ದಿನೇ ತಮ್ಮ ಗೆಳತಿಯನ್ನು ವಿವಾಹವಾಗಿದ್ದಾರೆ.

ಕೊಕ್ಕೇನ್ ಮತ್ತು ಪೂಜಾ ಅವರು ಸರಳ ಉಡುಪು ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೊಕ್ಕೇನ್ ಅವರು ಮೂಲತಃ ಕೇರಳದವರಾಗಿದ್ದು, ನಟ ಪುನೀತ್ ರಾಜ್‍ಕುಮಾರ್ ಅಭಿನಯದ ‘ಪೃಥ್ವಿ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಮತ್ತೆ ನಟ ಪುನೀತ್ ಅಭಿನಯದ ‘ಯುವರತ್ನ’ ಚಿತ್ರದಲ್ಲೂ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *