Thursday, 25th April 2019

Recent News

ತಮನ್ನಾ ಬದ್ಲು ಬೇರೆ ನಟಿ ಜೊತೆ ಮತ್ತೆ ಕೆಜಿಎಫ್ ಸಾಂಗ್ ಶೂಟ್

ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಕನ್ನಡ ಸಿನಿಮಾರಂಗದಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಲು ಮುಂದಾಗಿದೆ. ಈಗ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಬದಲು ಬೇರೆ ನಟಿಯ ಜೊತೆ ಸಾಂಗ್ ಶೂಟ್ ಮಾಡಲು ಮುಂದಾಗಿದೆ.

ಕನ್ನಡದ ‘ಕೆಜಿಎಫ್’ ಸಿನಿಮಾದಲ್ಲಿ ತಮನ್ನಾ ಯಶ್ ಜೊತೆ 1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ‘ಪರೋಪಕಾರಿ’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು…’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಕನ್ನಡ ಹಾಡಿನ ಡ್ಯಾನ್ಸ್ ಗೆ ಬಾಲಿವುಡ್ ಮಂದಿ ಬ್ರೇಕ್ ಹಾಕಿದ್ದು, ಸಿನಿಮಾದಿಂದ ಹಾಡನ್ನು ಹಿಂದಿ ವಿತರಕರು ಕೈ ಬಿಟ್ಟಿದ್ದಾರೆ.

ಈಗ ಬೇರೆ ಹಾಡಿಗೆ ಬೇರೆ ನಟಿಯೊಂದಿಗೆ ಸಾಂಗ್ ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾ ಪಂಚಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲ ಭಾಷೆಯಲ್ಲೂ ಇದೇ ಹಾಡು ಇದೆ. ಆದರೆ ಹಿಂದಿಯಲ್ಲಿ ಮಾತ್ರ ಬದಲಾವಣೆ ಮಾಡಲಾಗುತ್ತಿದೆ. ಕನ್ನಡ ಹಾಡಿನ ಬದಲು 1989ರಲ್ಲಿ ತೆರೆಕಂಡಿದ್ದ ತ್ರಿದೇವ್ ಅಭಿನಯದ ಸಿನಿಮಾದ ‘ಗಲಿ ಗಲಿ ಮೇ…’ ಹಾಡನ್ನ ರಿ-ಕ್ರಿಯೇಟ್ ಮಾಡಲು ಮುಂದಾಗಿದ್ದು, ಹಿಂದಿಯಲ್ಲಿ ಈ ಹಾಡು ಬಳಸಲು ಚಿತ್ರತಂಡ ಮುಂದಾಗಿದೆ. ಅದರಂತೆಯೇ ನಟಿ ತಮನ್ನಾ ಬದಲು ಬಾಲಿವುಡ್ ಖ್ಯಾತ ನಟಿ ಮೌನಿ ರಾಯ್ ಜೊತೆ ಯಶ್ ಡ್ಯಾನ್ಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಚಿತ್ರತಂಡ ಪ್ರಚಾರದ ಕಾರ್ಯದಲ್ಲಿ ಮುಂಬೈನಲ್ಲಿದೆ. ಆದ್ದರಿಂದ ನಟ ಯಶ್ ಅಲ್ಲಿಯೇ ಇದ್ದು, ಡಿಸೆಂಬರ್ 7 ಮತ್ತು 8 ಅಂದರೆ ನಾಳೆ ಮತ್ತು ಶನಿವಾರ ಎರಡು ದಿನಗಳ ಕಾಲ ಸಾಂಗ್ ಶೂಟಿಂಗ್ ಮುಗಿಸಲಿದ್ದಾರೆ. ಬಳಿಕ ಡಿಸೆಂಬರ್ 9 ರಂದು ಹೈದರಾಬಾದ್ ನಲ್ಲಿ ನಡೆಯಲಿರುವ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಯಶ್ ಆಗಮಿಸಲಿದ್ದಾರೆ.

‘ಕೆಜಿಎಫ್’ ಸಿನಿಮಾ ಈಗಾಗಲೇ ಎರಡು ಟ್ರೇಲರ್ ಒಂದು ಹಾಡು ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಈ ಸಿನಿಮಾ ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೇ ತಿಂಗಳು 21 ರಂದು ಜಗತ್ತಿನಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದ್ದು, ಇನ್ನು ಕೇವಲ 15 ದಿನಗಳು ಮಾತ್ರ ಬಾಕಿ ಇದೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *