Connect with us

Bengaluru City

ಜನವರಿ 8, ಬೆಳಗ್ಗೆ 10.18ಕ್ಕೆ ಕೆಜಿಎಫ್-2 ಟೀಸರ್ ಬಿಡುಗಡೆ

Published

on

ಬೆಂಗಳೂರು: ಬಹುನಿರೀಕ್ಷಿತ ಚಿತ್ರ ಕೆಜಿಎಫ್-2 ಸಿನಿಮಾದ ಟೀಸರ್ ಕೇವಲ ಎರಡು ದಿನದಲ್ಲಿ ಅಂದರೆ ಜನವರಿ 8ರಂದು ಬಿಡುಗಡೆಯಾಗಲಿದೆ.

ಹೌದು. ಈ ಸಂಬಂಧ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್-2 ಟೀಸರ್ ಬಿಡುಗಡೆಗೆ ಕೇವಲ 2 ದಿನ ಮಾತ್ರ ಬಾಕಿ ಇದೆ. ಜನವರಿ 8ರಂದು ಬೆಳಗ್ಗೆ 10.18ಕ್ಕೆ ಟೀಸರ್ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಪ್ರಶಾಂತ್ ನೀಲ್ ಅವರು ಕೆಲ ಪೇಪರ್ ಕಟಿಂಗ್ಸ್ ರೀತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಮೂಲಕ ಕೆಜಿಎಫ್ ಮೊದಲ ಭಾಗದ ಸೂಪರ್ ರಾಕಿಂಗ್ ಡೈಲಾಗ್ ಗಳನ್ನ ನೆನಪಿಸಿದ್ದರು. ಮೊದಲ ಪಾರ್ಟ್ ನಲ್ಲಿಯಂತೆ ಎರಡನೇ ಭಾಗದಲ್ಲಿ ರಗಡ್ ಡೈಲಾಗ್ ಇರುವ ಸಣ್ಣ ಸುಳಿವನ್ನ ಪ್ರಶಾಂತ್ ನೀಲ್ ನೀಡಿದಂತೆ ಕಾಣಿಸ್ತಿದೆ. ಅದರ ಜೊತೆಯಲ್ಲಿ ಬೆಳಗ್ಗೆ ಕೈಯಲ್ಲೊಂದು ರಾಡ್ ಹಿಡಿದು ಯಾವುದೇ ಬೇಟೆಗೆ ಕಾಯುತ್ತಿರುವಂತೆ ರಾಕಿ ಕುಳಿತಿರುವ ಫೋಟೋ ಸಹ ಹಂಚಿಕೊಂಡಿದ್ದರು.

ಚಿನ್ನ ಸಿಕ್ಕಾಗ ಹುಟ್ಟಿದವ ಅದರ ಒಡೆಯನಾಗ್ತಾನಾ? ಅವನ ಅಂತ್ಯವಾಗುತ್ತಾ? ಆದ್ರೆ ಹೇಗಾಗುತ್ತೆ? ರಾಕಿ ಬಾಯ್ ಸಿನಿಮಾದ ನಾಯಕನಾ ಅಥವಾ ಖಳನಟನಾ? ಮುಂಬೈನಿಂದ ಬಂದವ ಹೇಗೆ ರೀನಾಳ ಪ್ರೀತಿಯನ್ನ ಉಳಿಸಿಕೊಳ್ಳತ್ತಾನಾ ಅನ್ನೋ ಹಲವು ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ಪತ್ರಿಕೆಯಲ್ಲಿ ಹೆಡ್‍ಲೈನ್ಸ್ ಗಳನ್ನು ಹಾಕಿದ್ದರು.

ಒಟ್ಟಿನಲ್ಲಿ ಕೆಜಿಎಫ್ ಮೊದಲ ಭಾಗ ನೋಡಿದವರು ಹಲವು ಪ್ರಶ್ನೆಗಳ ಜೊತೆ ಸಿನಿಮಾ ಮಂದಿರದಿಂದ ಹೊರ ಬಂದಿದ್ದಾರೆ. ಆ ಪ್ರಶ್ನೆಗಳ ಉತ್ತರ ಕಂಡುಕೊಳ್ಳಲು ಕೆಜಿಎಫ್-2ರ ನೋಡುವ ತವಕಲ್ಲಿ ಅಭಿಮಾನಿ ಬಳಗ ಇದೆ. ಜನವರಿ 8ರಂದು ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ದಿನ ಕೆಜಿಎಫ್ ಚಾಪ್ಟರ್ 2ರ ಟೀಸರ್ ಅನಾವರಣಗೊಳ್ಳಲಿದೆ.

Click to comment

Leave a Reply

Your email address will not be published. Required fields are marked *

www.publictv.in