Connect with us

Cinema

ವಿಲನ್ ಫಾರ್ ಎವೆರ್ – ರಾಕಿ ಭಾಯ್ ಖಡಕ್ ಲುಕ್ ಔಟ್

Published

on

ಬೆಂಗಳೂರು: ಕೆಜಿಎಫ್ ಚಾಪ್ಟರ್-2 ಅಂಗಳದಿಂದ ಬರೋ ಹೊಸ ಸುದ್ದಿಗಾಗಿ ರಾಕಿಂಗ್ ಸ್ಟಾರ್ ಬಳಗ ತುದಿಗಾಲಿನಲ್ಲಿ ನಿಂತು ವೇಟ್ ಮಾಡುತ್ತಿರುತ್ತೆ. ಬೆಳಗ್ಗೆ ತಿಂಡಿ ಜೊತೆ ಕೆಜಿಎಫ್ ವಿಷಯ ತಿಳಿದುಕೊಂಡಿದ್ದ ರಾಕಿ ಫ್ಯಾನ್ಸ್ ಗೆ ರಾತ್ರಿ ವೇಳೆಗೆ ಮತ್ತೊಂದು ಗನ್ ಹಿಡಿದ ಗಜಕೇಸರಿಯ ದರ್ಶನವಾಗಿದೆ.

ಹೌದು, ಡಿಓಪಿ ಭುವನ್ ಗೌಡ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ರಾಕಿ ಬಾಯ್ ಜಬರ್ ದಸ್ತ್ ಫೋಟೋವನ್ನ ರಾಕಿಂಗ್ ಸ್ಟಾರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಜೊತೆಗೆ ಖಡಕ್ ಲೈನ್ಸ್ ಬರೆದುಕೊಳ್ಳುವ ಮೂಲಕ ವಿಲನ್ ಫಾರ್ ಎವೆರ್ ಎಂದಿದ್ದಾರೆ.

ಭಾರೀ ನಿರೀಕ್ಷೆ ಮೂಡಿಸಿರುವ ಕೆಜಿಎಫ್ ಚಾಪ್ಟರ್-2 ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಈ ನಡುವೆ ಇಂದು ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಕುರಿತ ವಿಚಾರವೊಂದನ್ನು ಹಂಚಿಕೊಂಡಿದ್ದರು.

ಸಿನಿಮಾದ ಕುರಿತು ಟ್ವಿಟ್ ಮಾಡಿದ್ದ ಪ್ರಶಾಂತ್ ನೀಲ್, ರಾಕಿ – ಅಧಿರಾ ಎಂದು ಬರೆದು ನಡುವೆ ಜಗಳ ಸಿಂಬಲ್ ಹಾಕಿದ್ದಾರೆ. ಅಂದರೆ ಕ್ಲೈಮ್ಯಾಕ್ಸ್ ನಲ್ಲಿ ಯಶ್ ಹಾಗೂ ಸಂಜಯ್ ದತ್ ನಡುವೆ ಕದನ ನಡೆಯಲಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಖ್ಯಾತ ಆ್ಯಕ್ಷನ್ ಡೈರೆಕ್ಟರ್‍ಗಳಾದ ಅನ್ಬರಿವ್ ಬ್ರದರ್ಸ್ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿದ್ದು, ಈ ಮೂಲಕ ರಾಕಿ ಭಾಯ್ ಹಾಗೂ ಅಧೀರನ ಯದ್ಧಕ್ಕೆ ಫೈಟ್ ಮಾಸ್ಟರ್ಸ್ ರೆಡಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದರು.

Click to comment

Leave a Reply

Your email address will not be published. Required fields are marked *

www.publictv.in