Connect with us

Bengaluru City

ಕೆಜಿಎಫ್ ಗಾಗಿ ಕಾಯ್ತಿರೋ ಬಾಲಿವುಡ್ ನಟನಿಗೆ ರಾಕಿ ಉತ್ತರ

Published

on

-ಕೆಜಿಎಫ್ ಬಿಡುಗಡೆಯ ಸುಳಿವು ನೀಡಿದ ಯಶ್

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಕಾಯುತ್ತಿರುವ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಗೆ ರಾಕಿಬಾಯ್ ಯಶ್ ಉತ್ತರಿಸುವ ಮೂಲಕ ಚಿತ್ರದ ಬಿಡುಗಡೆಯ ಸುಳಿವು ನೀಡಿದ್ದಾರೆ.

ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಇಡೀ ಭಾರತೀಯ ಸಿನಿ ಲೋಕವೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಬಿಡುಗಡೆ ಮುನ್ನವೇ ಕೆಜಿಎಫ್-ಚಾಪ್ಟರ್ 2 ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದು, ನಟ ಫರ್ಹಾನ್ ಅಖ್ತರ್, ರಾಕಿಗಾಗಿ ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಫರ್ಹಾನ್ ಅಖ್ತರ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ರಾಮಾಚಾರಿ, ರಾಕಿಯ ಬಿರುಗಾಳಿ (ತೂಫಾನ್)ಶೀಘ್ರದಲ್ಲೇ ಬರಲಿದೆ ಎಂದು ಉತ್ತರಿಸಿದ್ದಾರೆ. ಫರ್ಹಾನ್ ಅಖ್ತರ್ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯ ಫೋಟೋ ಹಂಚಿಕೊಂಡಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಜಿಎಫ್-ಚಾಪ್ಟರ್ 2 ಇದೆ. ಉಳಿದಂತೆ ಗೋಲ್‍ಮಾಲ್-5, ಬ್ರಹ್ಮಾಸ್ತ್ರ, ಸೂರ್ಯವಂಶಿ ಮತ್ತು ’83’ ಸಿನಿಮಾಗಳು ಕ್ರಮವಾಗಿ 2,3,4 ಹಾಗೂ 5ನೇ ಸ್ಥಾನದಲ್ಲಿವೆ. ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿರುವ ಕೆಜಿಎಫ್ ಮೊದಲ ಸ್ಥಾನದಲ್ಲಿದೆ.

ಸಿನಿಮಾದಲ್ಲಿ ಸಂಜಯ್ ದತ್ ಮತ್ತು ರವೀನಾ ಟಂಡನ್ ನಟಿಸಿದ್ದು, ಚಿತ್ರ ಪ್ರತಿದಿನ ಕುತೂಹಲವನ್ನ ಹುಟ್ಟು ಹಾಕುತ್ತಿದೆ. ಅಭಿಮಾನಿಗಳು ಸಹ ಕೆಜಿಎಫ್ ಅಂಗಳದಿಂದ ಬರೋ ವಿಷಯಗಳಿಗಾಗಿ ಕಾಯುತ್ತಿರುತ್ತಾರೆ.