ಕೊನೆಗೂ KGF-3 ರಹಸ್ಯ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

Advertisements

`ಕೆಜಿಎಫ್ 2′ (KGF-2) ಚಿತ್ರದ ಸಕ್ಸಸ್ ನಂತರ ಯಶ್ (Yash) ಮುಂದಿನ ಚಿತ್ರಕ್ಕಾಗಿ (Film) ಭರ್ಜರಿ ತಯಾರಿ ಮಾಡ್ತಿದ್ದಾರೆ.

Advertisements

ನ್ಯಾಷನಲ್ ಸ್ಟಾರ್ ಆಗಿ ದಶದಿಕ್ಕುಗಳಲ್ಲೂ ಯಶ್ ಮಿಂಚ್ತಿದ್ದಾರೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಮುಂದಿನ ನಡೆ ಮೇಲೆ ಎಲ್ಲರಿಗೂ ಕಣ್ಣಿದೆ. ಯಶ್ ಮುಂದಿನ ಪ್ರಾಜೆಕ್ಟ್ ಅಪ್‌ಡೇಟ್‌ಗಳಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗೆ ಹಾಲಿವುಡ್ ನಿರ್ದೇಶಕರನ್ನ ಭೇಟಿ ಮಾಡಿದ್ದ ಯಶ್ ಇದೀಗ `ಕೆಜಿಎಫ್ 3′ (KGF-3) ಚಿತ್ರದ ಕುರಿತು ಒಂದಿಷ್ಟು ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಹಾಲಿವುಡ್‌ಗೆ ಯಶ್‌ ಎಂಟ್ರಿ? ವಿಶ್ವದ ಟಾಪ್‌ ರೇಸರ್‌ ಲೇವಿಸ್‌ ಹ್ಯಾಮಿಲ್ಟನ್‌ ಭೇಟಿ

Advertisements

ಈ ಕುರಿತು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಯಶ್, ಸದ್ಯ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದ್ದೇನೆ. ಮುಂದಿನ ಸಿನಿಮಾದ ತಯಾರಿ ನಡೆಯುತ್ತಿದೆ. ಫಿಟ್‌ನೆಸ್ (Fitness), ಸ್ಕ್ರಿಪ್ಟ್‌ ಮಾತುಕತೆ ಈ ರೀತಿ ದೈನಂದಿನ ಕಾರ್ಯಕ್ರಮಗಳು ನಡೆಯುತ್ತಿವೆ. ಆದ್ರೆ ಕೆಜಿಎಫ್-3 ಸದ್ಯಕ್ಕಂತೂ ಇಲ್ಲ ಎಂದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಇದನ್ನೂ ಓದಿ: ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ- ಲಲಿತಾ ನಾಯಕ್‌ಗೆ ಖಾದರ್ ತಿರುಗೇಟು

ಕೆಜಿಎಫ್ ಸಿನಿಮಾಗಾಗಿ (KGF Cinema) 5-6 ವರ್ಷ ಶ್ರಮ ಹಾಕಿದ್ದೇವೆ. ಅದರಂತೆ ಯಶಸ್ಸು ಕಂಡಿದ್ದೇವೆ. ಕೋವಿಡ್ ಪ್ಯಾಂಡಮಿಕ್‌ನಿಂದಾಗಿ ಟೈಂ ಎಷ್ಟು ಮುಖ್ಯ ಅನ್ನೋದು ನನಗೆ ಗೊತ್ತಾಗಿದೆ. ಹಾಗಾಗಿ ಕೆಜಿಎಫ್-2 ಸಿನಿಮಾ ನಂತರ ನನ್ನ ಫ್ಯಾಮಿಲಿಗೂ ಟೈಂ ಕೊಡುತ್ತಿದ್ದೇನೆ. ಇದೆಲ್ಲದರ ನಡುವೆ ಹೊಸ ಸಿನಿಮಾಗಳ ಬಗ್ಗೆ ಮಾತುಕತೆ ನಡೀತಿದೆ. ಸದ್ಯ ನಾನು ಹೊಸತೇನಾದರೂ ಮಾಡಬೇಕು ಅಂದುಕೊಂಡಿದ್ದೇನೆ. ಹಾಗಾಗಿ ಕೆಜಿಎಫ್-3 ಸಿನಿಮಾ ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ.

Advertisements

Live Tv

Advertisements
Exit mobile version