Connect with us

Bengaluru City

ಕೆಜಿಎಫ್ ಚಾಪ್ಟರ್ 2 – ಕಪ್ಪು ಬಣ್ಣದ ಸೀರೆಯೊಂದಿಗೆ ರೀನಾ ಮಿಂಚಿಂಗ್

Published

on

ಬೆಂಗಳೂರು: ಕೆಜೆಎಫ್ ಚಾಪ್ಟರ್ 2 ಚಿತ್ರದ ನಾಯಕಿ ರೀನಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಶ್ರೀನಿಧಿ ಶೆಟ್ಟಿ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಕಪ್ಪು ಬಣ್ಣದ ಸೀರೆಯುಟ್ಟು ಎರಡು ಕೈಯಿಂದ ಬಾಗಿಲನ್ನು ತೆರೆಯುತ್ತಿರುವ ರೀನಾ ಚಿತ್ರವನ್ನು ಪ್ರಕಟಿಸಿ ಶುಭ ಕೋರಿದೆ.

ಕೆಜಿಎಫ್-2 ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ, ‘ಪ್ರೀತಿ ಮತ್ತು ಕ್ರೂರತೆ ನಡುವೆ ಸಹಬಾಳ್ವೆ ಸಾಧ್ಯವೇ’ ಎಂದು ಪ್ರಶ್ನಿಸಿ ಹಾರ್ಟ್ ಹಾಗೂ ಕತ್ತಿ ಎಮೋಜಿ ಹಾಕಿದ್ದಾರೆ. ವಿಶಿಂಗ್ ಅವರ್ ರೀನಾ ಶ್ರೀನಿಧಿ ಶೆಟ್ಟಿ ಎ ವೆರಿ ಹ್ಯಾಪಿ ಬರ್ತ್ ಡೇ ಎಂದು ಶುಭಾಶಯ ತಿಳಿಸಿದ್ದಾರೆ.

ಬಹುನಿರೀಕ್ಷಿತ ಕೆಜಿಎಫ್-2 ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡದೆ ಆಗಿದ್ದರೆ ದಸರಾ ವೇಳೆ ಕೆಜಿಎಫ್-2 ತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಇಡೀ ಚಿತ್ರೋದ್ಯಮವೇ ಸ್ತಬ್ಧವಾಗಿದ್ದರಿಂದ ಶೂಟಿಂಗ್ ಸಹ ನಿಂತಿತ್ತು. ಇದೀಗ ಆರಂಭವಾಗಿದ್ದು, ಈಗಾಗಲೇ ನಟ ಪ್ರಕಾಶ್ ರೈ ಹಾಗೂ ಮಾಳವಿಕಾ ಅವಿನಾಶ್ ಭಾಗದ ಚಿತ್ರೀಕಣರವನ್ನು ಪೂರ್ಣಗೊಳಿಸಲಾಗಿದೆ. ರಾಕಿ ಭಾಯ್ ಯಶ್ ಹೈದಾರಾಬಾದ್‍ನಲ್ಲಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗೆ ಮಲ್ಪೆ ಬೀಚ್‍ನಲ್ಲಿ ನಡೆದ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್, ಮುಂದಿನ ಚಿತ್ರೀಕರಣಕ್ಕೆ ಹೈದರಾಬಾದಿಗೆ ಹಾರಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜಾಕೆಟ್ ಧರಿಸಿ, ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟು ರಾಖಿ ಭಾಯ್ ನಡೆದುಕೊಂಡು ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ರಾಖಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಆಗಸ್ಟ್ 26ರಿಂದ ಕೆಜಿಎಫ್-2 ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹಿರಿಯ ನಟ ಪ್ರಕಾಶ್ ರೈ ಮತ್ತು ಮಾಳವಿಕಾ ಅವರ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಕೊರೊನಾ ಲಾಕ್‍ಡೌನ್‍ಗೂ ಮುನ್ನ ಬಾಲಿವುಡ್‍ನ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಬಂದು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಚಿತ್ರತಂಡ ಈ ಮುಂಚೆಯೇ ಅಕ್ಟೋಬರ್ 23ಕ್ಕೆ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಕೊರೊನಾದಿಂದಾಗಿ ಚಿತ್ರದ ಶೂಟಿಂಗ್ ಆರಂಭವಾಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಚಿತ್ರ ಮುಂದಿನ ವರ್ಷ ಜನವರಿ 14ರಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ. ಕೆಜಿಎಫ್ ಮೊದಲ ಚಾಪ್ಟರ್ ನೋಡಿ ಥ್ರಿಲ್ ಆಗಿದ್ದ ಚಿತ್ರಪ್ರೇಮಿಗಳು ಈಗ ಕೆಜಿಎಫ್-2ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *